ತುಮಕೂರು:- ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆಯೋರ್ವರು ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಡಾ. ಸವಿತಾ ಲೋಕಾ ಬಲೆಗೆ ಬಿದ್ದ ನೇತ್ರಾ ಚಿಕಿತ್ಸಕಿ. ಉಪ್ಪಾರಹಳ್ಳಿ ನಿವಾಸಿ ಅವಿನಾಶ್ ಅವರ ತಾಯಿ ಕಣ್ಣಿಗೆ ಲೆನ್ಸ್ ಹಾಕಲು ಡಾ.ಸವಿತಾ ಅವರು ಹಣದ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಅವಿನಾಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮನೋಜ್ ಮೂಲಕ ಡಾ.ಸವಿತಾ ಲಂಚದ ಹಣ ಪಡೆದಾಗ, ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್ ನೇತೃತ್ವದ ತಂಡ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಡಾ.ಸವಿತಾ ಮತ್ತು ಮನೋಜ್ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿದಿದೆ.



