ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವದ ವದಂತಿ ಹರಿದಾಡಿದ ಹಿನ್ನೆಲೆ, ಚಿಕ್ಕಬಳ್ಳಾಪುರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಜನರು ಬಂಕ್ಗಳ ಮುಂದೆ ಸಾಲು ನಿಂತು ತಮ್ಮ ವಾಹನಗಳಿಗೆ ಇಂಧನ ತುಂಬಿಸುತ್ತಿದ್ದಾರೆ.
ನಯಾರ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 5 ರೂ. ಹೆಚ್ಚಳದೊಂದಿಗೆ 108.28 ರೂ. ಆಗಿದ್ದು, ಡೀಸೆಲ್ ಲೀಟರ್ಗೆ 3 ರೂ. ಏರಿಕೆಯೊಂದಿಗೆ 94.10 ರೂ. ತಲುಪಿದೆ. ಸ್ಟೇಷನ್ ರಸ್ತೆಯಲ್ಲಿನ ಹಾಗೂ ಬಸವೇಶ್ವರ ರಸ್ತೆಯ ಪೆಟ್ರೋಲ್ ಬಂಕ್ಗಳಲ್ಲಿ ಬೈಕ್ ಮತ್ತು ಕಾರುಗಳ ಸಾಲು ಕಂಡು ಬಂದಿದೆ.
ಇಂಧನ ಸರಬರಾಜು ಪ್ರಸ್ತುತ ಸುಗಮವಾಗಿದೆ. ಆದರೆ ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ವಾಹನಗಳಿಗೆ ಫುಲ್ ಸ್ಟಾಕ್ ಮಾಡಿಕೊಳ್ಳುತ್ತಿರುವುದರಿಂದ ಕೆಲ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಗ ಖಾಲಿಯಾಗುತ್ತಿರುವುದು ಕಂಡುಬಂದಿದೆ. ಹೊಸ ಸರಬರಾಜು ಬರಲು ವಿಳಂಬವಾಗುತ್ತಿದ್ದು, ಇದರಿಂದ ಪ್ಯಾನಿಕ್ ಖರೀದಿ ತೀವ್ರಗೊಂಡಿದೆ.



