HomeIndia Newsತಮಿಳುನಾಡು ಚುನಾವಣೆ 2026: ಇತಿಹಾಸದಲ್ಲೇ ದಾಖಲೆ ಮತದಾನ!

ತಮಿಳುನಾಡು ಚುನಾವಣೆ 2026: ಇತಿಹಾಸದಲ್ಲೇ ದಾಖಲೆ ಮತದಾನ!

For Dai;y Updates Join Our whatsapp Group

Spread the love

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.84.69ರಷ್ಟು ಮತದಾನ ದಾಖಲಾಗಿದ್ದು, ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

1967ರಿಂದ ದ್ರಾವಿಡ ರಾಜಕೀಯ ಪ್ರಭಾವ ಹೆಚ್ಚಾದ ಬಳಿಕವೂ ರಾಜ್ಯದಲ್ಲಿ ಮತದಾನದ ಪ್ರಮಾಣ ಶೇಕಡಾ 80 ದಾಟಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಹಿಂದಿನ ದಾಖಲೆಗಳನ್ನು ಮೀರಿಸಿ ಮತದಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಜಿಲ್ಲಾ ಹಾಗೂ ಲಿಂಗವಾರು ಅಂಕಿಅಂಶಗಳ ಪ್ರಕಾರ, ಪುರುಷರು ಶೇ.83.57, ಮಹಿಳೆಯರು ಶೇ.85.76 ಮತ್ತು ತೃತೀಯ ಲಿಂಗಿಗಳು ಶೇ.60.49ರಷ್ಟು ಮತದಾನ ಮಾಡಿದ್ದಾರೆ.

ಈ ಬಾರಿ ಮಹಿಳಾ ಮತದಾರರ ಹೆಚ್ಚಿನ ಭಾಗವಹಿಸುವಿಕೆ, ಎಸ್‌ಐಆರ್ ಪ್ರಕ್ರಿಯೆಯ ಪರಿಣಾಮ, ಹಾಗೂ ಹೊಸ ರಾಜಕೀಯ ಚಲನಶೀಲತೆ ಮತದಾನ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಎಸ್‌ಐಆರ್ ಬಳಿಕ ಮತದಾರರ ಸಂಖ್ಯೆ 6.41 ಕೋಟಿಯಿಂದ 5.73 ಕೋಟಿಗೆ ಇಳಿಕೆಯಾಗಿದ್ದು, ಸುಮಾರು 58 ಲಕ್ಷ ಮತದಾರರು ಡಿಲೀಟ್ ಆಗಿದ್ದಾರೆ ಎಂಬ ಮಾಹಿತಿ ಇದೆ.

ಇದರೊಂದಿಗೆ ಮಹಿಳಾ ಮತದಾರರು ಪುರುಷರಿಗಿಂತ 10 ಲಕ್ಷ ಹೆಚ್ಚಾಗಿ ನೋಂದಾಯಿತರಾಗಿದ್ದಾರೆ. ಜೊತೆಗೆ ಯುವ ಮತದಾರರ ಭಾಗವಹಿಸುವಿಕೆ, ಹೊಸ ರಾಜಕೀಯ ಪಕ್ಷಗಳ ಉದಯ ಹಾಗೂ ಆಡಳಿತ ವಿರೋಧಿ ಅಲೆಯೂ ಮತದಾನ ಏರಿಕೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!