HomeIndia Newsಹಾರ್ಮುಜ್ ಜಲಸಂಧಿ ದಾಟಿ ಸುರಕ್ಷಿತವಾಗಿ ಭಾರತ ತಲುಪಿದ 20,000 ಟನ್ LPG ಟ್ಯಾಂಕರ್

ಹಾರ್ಮುಜ್ ಜಲಸಂಧಿ ದಾಟಿ ಸುರಕ್ಷಿತವಾಗಿ ಭಾರತ ತಲುಪಿದ 20,000 ಟನ್ LPG ಟ್ಯಾಂಕರ್

For Dai;y Updates Join Our whatsapp Group

Spread the love

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಭಾರತಕ್ಕೆ ಎಲ್‌ಪಿಜಿ ಹಾಗೂ ಕಚ್ಚಾ ತೈಲ ಪೂರೈಕೆ ನಿರಂತರವಾಗಿ ಸಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಮಾರ್ಷಲ್ ದ್ವೀಪಗಳ ಧ್ವಜ ಹೊಂದಿರುವ ‘ಸಿಮಿ’ ಎಲ್‌ಪಿಜಿ ಟ್ಯಾಂಕರ್ ಸುರಕ್ಷಿತವಾಗಿ ಗುಜರಾತ್‌ನ ಕಾಂಡ್ಲಾ ಸಮೀಪದ ದೀನ್‌ದಯಾಳ್ ಬಂದರನ್ನು ತಲುಪಿದೆ.

ಭಾರತದ ಇಂಧನ ಭದ್ರತೆಗೆ ಇದು ಮಹತ್ವದ ಬೆಳವಣಿಗೆಯಾಗಿದ್ದು, ಸುಮಾರು 20 ಸಾವಿರ ಟನ್ ದ್ರವ ಪ್ರೊಪೇನ್ ಮತ್ತು ಬ್ಯುಟೇನ್ ಸಾಗಿಸುತ್ತಿದ್ದ ಈ ಟ್ಯಾಂಕರ್ ಮೇ 13ರಂದು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತ ತಲುಪಿದೆ.

ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಎಂಟು ಮಂದಿ ಉಕ್ರೇನ್ ಮೂಲದವರಾಗಿದ್ದರೆ, 13 ಮಂದಿ ಫಿಲಿಪೈನ್ಸ್‌ನ ಸಿಬ್ಬಂದಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಕಟ್ಟುನಿಟ್ಟಿನ ಮೇಲ್ವಿಚಾರಣೆಯಡಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತ ತಲುಪಿದ 11ನೇ ಎಲ್‌ಪಿಜಿ ಟ್ಯಾಂಕರ್ ಇದಾಗಿದೆ.

ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ (ಡಿಜಿ ಶಿಪ್ಪಿಂಗ್), ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ಸಮನ್ವಯದೊಂದಿಗೆ ಈ ಮಾರ್ಗದಲ್ಲಿ ಹಡಗುಗಳ ಸುರಕ್ಷಿತ ಸಂಚಾರ ಖಚಿತಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಪೂರೈಕೆ ಸರಪಳಿಯ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ 75 ದಿನಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಕಚ್ಚಾ ತೈಲ ಸಂಗ್ರಹದ ಮೇಲೆ ಪರಿಣಾಮ ಬೀಳತೊಡಗಿದೆ.

ಆದರೂ, ಇಂಧನ ಸಾಗಣೆ ಹಡಗುಗಳ ನಿರಂತರ ಆಗಮನದಿಂದ ದೇಶದ ಇಂಧನ ಪೂರೈಕೆಯಲ್ಲಿ ಯಾವುದೇ ತಕ್ಷಣದ ವ್ಯತ್ಯಯ ಉಂಟಾಗದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!