HomeIndia Newsಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಭಾರೀ ಹೊಡೆತ? ‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ 42 ಯುದ್ಧ ವಿಮಾನಗಳಿಗೆ ಹಾನಿ

ಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಭಾರೀ ಹೊಡೆತ? ‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ 42 ಯುದ್ಧ ವಿಮಾನಗಳಿಗೆ ಹಾನಿ

For Dai;y Updates Join Our whatsapp Group

Spread the love

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಡೆಸಿದ್ದ ‘ಆಪರೇಷನ್ ಎಪಿಕ್ ಫ್ಯೂರಿ’ ವೇಳೆ ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳಿಗೆ ಭಾರೀ ಹಾನಿಯಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅಮೆರಿಕ ಕಾಂಗ್ರೆಸ್‌ಗೆ ಸಂಬಂಧಿಸಿದ ಸಿಆರ್‌ಎಸ್ ವರದಿ ಪ್ರಕಾರ, ಕಾರ್ಯಾಚರಣೆಯ ಅವಧಿಯಲ್ಲಿ ಕನಿಷ್ಠ 42 ಯುದ್ಧ ವಿಮಾನಗಳು ನಾಶವಾಗಿವೆ ಅಥವಾ ಗಂಭೀರ ಹಾನಿಗೊಳಗಾಗಿವೆ ಎನ್ನಲಾಗಿದೆ.

ವರದಿಯ ಪ್ರಕಾರ, ಅಮೆರಿಕ 4 F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್‌, 1 F-35A ಲೈಟ್ನಿಂಗ್ II, 7 KC-135 ಸ್ಟ್ರಾಟೋಟ್ಯಾಂಕರ್‌, 2 MC-130J ಕಮಾಂಡೋ ವಿಮಾನ, 1 E-3 ಸೆಂಟ್ರಿ AWACS, 1 HH-60W ಹೆಲಿಕಾಪ್ಟರ್ ಸೇರಿದಂತೆ ಹಲವು ಪ್ರಮುಖ ಯುದ್ಧೋಪಕರಣಗಳನ್ನು ಕಳೆದುಕೊಂಡಿದೆ. ಜೊತೆಗೆ 24 MQ-9 ರೀಪರ್ ಡ್ರೋನ್ ಹಾಗೂ 1 MQ-4C ಟ್ರೈಟಾನ್ ಕಣ್ಗಾವಲು ಡ್ರೋನ್ ಕೂಡ ನಾಶವಾಗಿವೆ ಎಂದು ಹೇಳಲಾಗಿದೆ.

ಈ ಹಾನಿಗೆ ಇರಾನ್ ಪ್ರತಿದಾಳಿ, ತಾಂತ್ರಿಕ ವೈಫಲ್ಯ ಹಾಗೂ ಯುದ್ಧ ಪರಿಸ್ಥಿತಿಯಲ್ಲಿನ ಗೊಂದಲ ಪ್ರಮುಖ ಕಾರಣಗಳಾಗಿರಬಹುದು ಎಂದು ವರದಿ ಉಲ್ಲೇಖಿಸಿದೆ. ಅಮೆರಿಕ ರಕ್ಷಣಾ ಇಲಾಖೆ ಇನ್ನೂ ಸಂಪೂರ್ಣ ಅಧಿಕೃತ ಲೆಕ್ಕ ನೀಡಿಲ್ಲ ಎಂಬ ಸಂಗತಿಯೂ ವರದಿಯಲ್ಲಿ ಉಲ್ಲೇಖವಾಗಿದೆ.

ಪೆಂಟಗನ್ ಕಾರ್ಯಕಾರಿ ನಿಯಂತ್ರಕ ಜೂಲ್ಸ್ ಡಬ್ಲ್ಯೂ ಹರ್ಸ್ಟ್ III, ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಯ ವೆಚ್ಚ ಈಗಾಗಲೇ 29 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಅಮೆರಿಕ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ. ವಿಮಾನಗಳ ದುರಸ್ತಿ ಮತ್ತು ಬದಲಿ ವ್ಯವಸ್ಥೆ ವೆಚ್ಚವೇ ದೊಡ್ಡ ಹೊರೆ ಆಗಿದೆ ಎಂದು ಅವರು ಹೇಳಿದ್ದಾರೆ.

‘ಆಪರೇಷನ್ ಎಪಿಕ್ ಫ್ಯೂರಿ’ ಅಮೆರಿಕದ ಸೈನಿಕ ಸಾಮರ್ಥ್ಯಕ್ಕೂ ಆರ್ಥಿಕತೆಯ ಮೇಲೂ ಭಾರೀ ಪರಿಣಾಮ ಬೀರಿದೆ ಎಂಬ ಚರ್ಚೆ ಇದೀಗ ಜಾಗತಿಕ ಮಟ್ಟದಲ್ಲಿ ಜೋರಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!