HomeLife Styleಮಿಕ್ಸರ್ ಸರಿಯಾಗಿ ರುಬ್ಬುತ್ತಿಲ್ಲವೇ? ಮನೆಯಲ್ಲೇ ಈ ಉಪಾಯ ಟ್ರೈ ಮಾಡಿ

ಮಿಕ್ಸರ್ ಸರಿಯಾಗಿ ರುಬ್ಬುತ್ತಿಲ್ಲವೇ? ಮನೆಯಲ್ಲೇ ಈ ಉಪಾಯ ಟ್ರೈ ಮಾಡಿ

For Dai;y Updates Join Our whatsapp Group

Spread the love

ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಮಿಕ್ಸರ್ ಮತ್ತು ಗ್ರೈಂಡರ್‌ಗಳ ಬ್ಲೇಡ್‌ಗಳು ಕಾಲಕ್ರಮೇಣ ಹರಿತ ಕಳೆದುಕೊಳ್ಳುವುದು ಸಾಮಾನ್ಯ.

ಇದರಿಂದ ಚಟ್ನಿ, ಮಸಾಲೆ ಹಾಗೂ ಇತರೆ ಪದಾರ್ಥಗಳು ಸರಿಯಾಗಿ ನುಣ್ಣಗಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವರು ಮಿಕ್ಸರ್ ಜಾರ್‌ನ್ನು ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗುವುದು ಅಥವಾ ಹೊಸ ಜಾರ್ ಖರೀದಿಸುವುದು ಮಾಡುತ್ತಾರೆ. ಆದರೆ ಮನೆಯಲ್ಲೇ ಇರುವ ಕೆಲವು ಸಾಮಾನ್ಯ ವಸ್ತುಗಳ ಸಹಾಯದಿಂದ ಯಾವುದೇ ಖರ್ಚಿಲ್ಲದೆ ಬ್ಲೇಡ್‌ಗಳನ್ನು ಮತ್ತೆ ಹರಿತಗೊಳಿಸಬಹುದು.

ಮಿಕ್ಸರ್ ಬ್ಲೇಡ್ ಶಾರ್ಪ್ ಮಾಡಲು ಕಲ್ಲು ಉಪ್ಪು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಮೊದಲು ಹರಿತ ಕಡಿಮೆಯಾದ ಜಾರ್‌ಗೆ ಬ್ಲೇಡ್ ಮುಳುಗುವಷ್ಟು ಕಲ್ಲು ಉಪ್ಪು ಹಾಕಬೇಕು. ನಂತರ ಜಾರ್ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಮಿಕ್ಸರ್‌ನಲ್ಲಿ ಅಳವಡಿಸಬೇಕು. ಮಿಕ್ಸರ್ ಅನ್ನು ನಿರಂತರವಾಗಿ ಓಡಿಸದೆ, ಮಧ್ಯ ಮಧ್ಯೆ ನಿಲ್ಲಿಸುತ್ತಾ ಒಂದು ಅಥವಾ ಎರಡು ನಿಮಿಷಗಳ ಕಾಲ ಹೆಚ್ಚಿನ ವೇಗದಲ್ಲಿ ಚಲಾಯಿಸಬೇಕು.

ಈ ಪ್ರಕ್ರಿಯೆಯಲ್ಲಿ ಕಲ್ಲು ಉಪ್ಪಿನ ಘರ್ಷಣೆಯಿಂದ ಬ್ಲೇಡ್‌ಗಳು ಮತ್ತೆ ಚಾಕುವಿನಂತೆ ಹರಿತವಾಗುತ್ತವೆ. ಜೊತೆಗೆ ಜಾರ್‌ನೊಳಗಿನ ಕೊಳಕು ಕೂಡ ಸ್ವಚ್ಛವಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೊಂದು ವಿಧಾನವಾಗಿ ಅಲ್ಯೂಮಿನಿಯಂ ಫಾಯಿಲ್ ಬಳಕೆಯನ್ನೂ ಸೂಚಿಸಲಾಗಿದೆ. ಫಾಯಿಲ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಜಾರ್‌ಗೆ ಹಾಕಿ ಒಂದು ನಿಮಿಷ ಹೆಚ್ಚಿನ ವೇಗದಲ್ಲಿ ಮಿಕ್ಸ್ ಮಾಡಿದರೆ, ಬ್ಲೇಡ್‌ಗಳ ಅಂಚುಗಳು ಮತ್ತೆ ತೀಕ್ಷ್ಣವಾಗುತ್ತವೆ.

ಬ್ಲೇಡ್ ಶಾರ್ಪ್ ಮಾಡಿದ ಬಳಿಕ ಜಾರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಅಗತ್ಯ. ಜಾರ್‌ಗೆ ಸ್ವಲ್ಪ ನೀರು ಮತ್ತು ಪಾತ್ರೆ ತೊಳೆಯುವ ದ್ರವ ಸೇರಿಸಿ ಮತ್ತೊಮ್ಮೆ ಮಿಕ್ಸರ್ ಆನ್ ಮಾಡಿ ತೊಳೆಯಬೇಕು. ನಂತರ ಶುದ್ಧ ನೀರಿನಿಂದ ತೊಳೆದು ಸಂಪೂರ್ಣ ಒಣಗಿದ ಬಳಿಕವೇ ಬಳಸುವುದು ಉತ್ತಮ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!