HomeSports NewsIPL 2026 winner prize money: ಐಪಿಎಲ್ IPL ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು...

IPL 2026 winner prize money: ಐಪಿಎಲ್ IPL ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತಾ.?

For Dai;y Updates Join Our whatsapp Group

Spread the love

ಬೆಂಗಳೂರು: ಐಪಿಎಲ್ 2026ರ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ 7:30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.

ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ದೊರೆಯುವ ಬಹುಮಾನ ಮೊತ್ತದ ಕುರಿತು ಕುತೂಹಲ ಹೆಚ್ಚಿದೆ. ಈವರೆಗೆ ಉಭಯ ತಂಡಗಳು ತಲಾ ಒಂದೊಂದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದು, ಈ ಬಾರಿಯ ಫೈನಲ್‌ನಲ್ಲಿ ಜಯ ಸಾಧಿಸುವ ತಂಡ ತನ್ನ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.

ಚಾಂಪಿಯನ್ ತಂಡಕ್ಕೆ ₹20 ಕೋಟಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2026ರ ಬಹುಮಾನ ಮೊತ್ತಕ್ಕಾಗಿ ₹46.5 ಕೋಟಿಗೂ ಅಧಿಕ ಹಣವನ್ನು ಮೀಸಲಿಟ್ಟಿದೆ. ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ₹20 ಕೋಟಿ ಬಹುಮಾನ ನೀಡಲಾಗುತ್ತದೆ.

ರನ್ನರ್‌ಅಪ್ ತಂಡಕ್ಕೆ ₹13 ಕೋಟಿ

ಫೈನಲ್‌ನಲ್ಲಿ ಸೋಲು ಅನುಭವಿಸುವ ತಂಡಕ್ಕೂ ಭರ್ಜರಿ ಮೊತ್ತದ ಬಹುಮಾನ ದೊರೆಯಲಿದೆ. ರನ್ನರ್‌ಅಪ್ ತಂಡಕ್ಕೆ ₹13 ಕೋಟಿ ನೀಡಲಾಗುತ್ತದೆ.

ಇನ್ನು ಮೂರನೇ ಸ್ಥಾನ ಪಡೆಯುವ ತಂಡಕ್ಕೆ ₹7 ಕೋಟಿ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡಕ್ಕೆ ₹6.5 ಕೋಟಿ ಬಹುಮಾನ ನೀಡಲಾಗುತ್ತದೆ.

ಟಾಪ್-4 ತಂಡಗಳ ಬಹುಮಾನ ಮೊತ್ತ

  • ಚಾಂಪಿಯನ್ ತಂಡ – ₹20 ಕೋಟಿ
  • ರನ್ನರ್‌ಅಪ್ ತಂಡ – ₹13 ಕೋಟಿ
  • ಮೂರನೇ ಸ್ಥಾನ – ₹7 ಕೋಟಿ
  • ನಾಲ್ಕನೇ ಸ್ಥಾನ – ₹6.5 ಕೋಟಿ

ಬಹುಮಾನ ಮೊತ್ತದ ಇತಿಹಾಸ

ಐಪಿಎಲ್ ಆರಂಭಿಕ ಆವೃತ್ತಿಗಳಾದ 2008 ಮತ್ತು 2009ರಲ್ಲಿ ಚಾಂಪಿಯನ್ ತಂಡಕ್ಕೆ ₹4.8 ಕೋಟಿ ಬಹುಮಾನ ನೀಡಲಾಗುತ್ತಿತ್ತು. ನಂತರ ವರ್ಷದಿಂದ ವರ್ಷಕ್ಕೆ ಬಹುಮಾನ ಮೊತ್ತ ಹೆಚ್ಚಾಗುತ್ತಾ ಬಂದಿದ್ದು, ಈಗ ₹20 ಕೋಟಿಗೆ ಏರಿಕೆಯಾಗಿದೆ. ಕೊರೊನಾ ಸಾಂಕ್ರಾಮಿಕದ ಪರಿಣಾಮ 2020ರಲ್ಲಿ ಮಾತ್ರ ಬಹುಮಾನ ಮೊತ್ತವನ್ನು ₹10 ಕೋಟಿಗೆ ಇಳಿಸಲಾಗಿತ್ತು.

ಟಾಪ್-4 ಹೊರಗಿನ ತಂಡಗಳಿಗೆ ಬಹುಮಾನವಿಲ್ಲ

ಐದನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗೆ ಮುಗಿಸುವ ತಂಡಗಳಿಗೆ ಯಾವುದೇ ಅಧಿಕೃತ ಬಹುಮಾನ ಮೊತ್ತ ನೀಡುವುದಿಲ್ಲ. ಆದಾಗ್ಯೂ ಪ್ರಾಯೋಜಕತ್ವ, ಪ್ರಸಾರ ಹಕ್ಕುಗಳು ಹಾಗೂ ಟಿಕೆಟ್ ಮಾರಾಟದ ಮೂಲಕ ಫ್ರಾಂಚೈಸಿಗಳು ಆದಾಯ ಗಳಿಸುತ್ತವೆ.

ಆಟಗಾರರಿಗೆ ಹೇಗೆ ಹಂಚಿಕೆ?

ಐಪಿಎಲ್ ನಿಯಮಗಳ ಪ್ರಕಾರ, ತಂಡಕ್ಕೆ ದೊರೆಯುವ ಬಹುಮಾನ ಮೊತ್ತದ ಶೇ.50ರಷ್ಟು ಹಣವನ್ನು ಆಟಗಾರರ ನಡುವೆ ಹಂಚಲಾಗುತ್ತದೆ. ಉಳಿದ ಶೇ.50ರಷ್ಟು ಮೊತ್ತ ಫ್ರಾಂಚೈಸಿ ಮಾಲೀಕರ ಪಾಲಾಗುತ್ತದೆ.

ವೈಯಕ್ತಿಕ ಪ್ರಶಸ್ತಿಗಳಿಗೂ ಭರ್ಜರಿ ಮೊತ್ತ

ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಸೇರಿದಂತೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ಗೆಲ್ಲುವ ಆಟಗಾರರು ಹೆಚ್ಚುವರಿ ನಗದು ಬಹುಮಾನ ಪಡೆಯಲಿದ್ದಾರೆ. ಈ ಪ್ರಶಸ್ತಿಗಳ ಮೂಲಕ ಒಬ್ಬ ಆಟಗಾರ ಸುಮಾರು ₹1 ಕೋಟಿವರೆಗೆ ಹೆಚ್ಚುವರಿ ಮೊತ್ತ ಗಳಿಸುವ ಅವಕಾಶವೂ ಇದೆ.

ಇದೀಗ ಎಲ್ಲರ ಕಣ್ಣು ಫೈನಲ್ ಪಂದ್ಯತ್ತ ನೆಟ್ಟಿದ್ದು, ಟ್ರೋಫಿಯ ಜೊತೆಗೆ ಕೋಟ್ಯಂತರ ರೂಪಾಯಿಗಳ ಬಹುಮಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!