ವಿಜಯಸಾಕ್ಷಿ ಸುದ್ದಿ, ಗದಗ: ದುಡಿಮೆಯನ್ನೇ ಬದುಕಿನ ಧರ್ಮವೆಂದು ನಂಬಿ ಗದಗ ಎಪಿಎಂಸಿಯಲ್ಲಿ ಹಮಾಲಿ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದ ಅಬ್ಬುಲ್‌ರಜಾಕ್ ಪೆಂಡಾರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅನಾರೋಗ್ಯಕ್ಕೀಡಾಗಿ ನಿಧನರಾಗಿದ್ದು, ಅವರ ಕುಟುಂಬಕ್ಕೆ ಗದಗ ಎಪಿಎಂಸಿ ಆಡಳಿತ ಮಂಡಳಿ ಮಾನವೀಯ ನೆರವಿನ ಹಸ್ತ ಚಾಚಿದೆ.
ಕೃಷಿ ಮಾರಾಟ ಇಲಾಖೆಯ ‘ಕಾಯಕ ನಿಧಿ ಯೋಜನೆ’ಯಡಿ ₹25 ಸಾವಿರ ಪರಿಹಾರದ ಚೆಕ್ ಅನ್ನು ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ಸುವರ್ಣಾ ವಾಲಿಕಾರ ಹಾಗೂ ಸಹ ಕಾರ್ಯದರ್ಶಿ ಎಂ.ಆರ್. ನದಾಫ್ ಅವರು ಮೃತರ ಸಹೋದರ ಮಾಬುಸಾಬ ಪೆಂಡಾರಿ ಅವರಿಗೆ ಹಸ್ತಾಂತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇದೇ ವೇಳೆ ಗದಗ-ಬೆಟಗೇರಿ ಜನರಲ್ ವರ್ಕರ್ಸ್ ಹಮಾಲರು ಮತ್ತು ಚಕ್ಕಡಿಯವರ ಸಮಿತಿಯೂ ಮೃತ ಕಾರ್ಮಿಕನ ಕುಟುಂಬದ ನೆರವಿಗೆ ಧಾವಿಸಿದೆ. ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪ ಮಾರೆಪ್ಪನವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ವೆಚ್ಚಕ್ಕಾಗಿ ₹10 ಸಾವಿರ ಧನಸಹಾಯ ನೀಡಿ ಮಾನವೀಯತೆ ಮೆರೆದರು.
ಪರವಾನಗಿ ಪಡೆದ ಹಮಾಲಿ ಕಾರ್ಮಿಕರ ಸಂಕಷ್ಟದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಕೃಷಿ ಮಾರಾಟ ಇಲಾಖೆ ಜಾರಿಗೆ ತಂದಿರುವ ‘ಕಾಯಕ ನಿಧಿ ಯೋಜನೆ’ ಕಾರ್ಮಿಕ ಕುಟುಂಬಗಳಿಗೆ ನಿಜವಾದ ಆಸರೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಜನರಲ್ ವರ್ಕರ್ಸ್ ಹಮಾಲರು ಮತ್ತು ಚಕ್ಕಡಿಯವರ ಸಮಿತಿಯ ಕಾರ್ಯದರ್ಶಿ ಇಮಾಮಸಾಬ ದಾವಲಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ, ಸದಸ್ಯರಾದ ಹುಸೇನಸಾಬ ವಡವಿ, ಬಸವರಾಜ ಸೂಡಿ, ಇಮಾಮಹುಸೇನ ರೋಣದ, ದೇವರಾಜ ಬಿನ್ನಾಳ, ಫಕ್ರುಸಾಬ ಘಟ್ಟದ ಸೇರಿದಂತೆ ಹಲವು ಹಮಾಲಿ ಬಂಧುಗಳು ಉಪಸ್ಥಿತರಿದ್ದು, ಅಗಲಿದ ಸಹೋ



