ಹಿಂದೂ ಧರ್ಮದಲ್ಲಿ ಶುಕ್ರವಾರವನ್ನು ಅತ್ಯಂತ ಶುಭ ಮತ್ತು ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ.
ಈ ದಿನ ಸಂಪತ್ತು, ಸಮೃದ್ಧಿ ಹಾಗೂ ಐಶ್ವರ್ಯದ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸಿದರೆ ಮನೆಯಲ್ಲಿ ಸುಖ-ಶಾಂತಿ, ಆರ್ಥಿಕ ಅಭಿವೃದ್ಧಿ ಮತ್ತು ಸೌಭಾಗ್ಯ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಶುಕ್ರವಾರ ಲಕ್ಷ್ಮೀ ಪೂಜೆ ಏಕೆ ವಿಶೇಷ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಿನವಾಗಿದೆ. ಶುಕ್ರನು ಐಶ್ವರ್ಯ, ಸೌಂದರ್ಯ, ದಾಂಪತ್ಯ ಸುಖ ಹಾಗೂ ಭೌತಿಕ ಸಮೃದ್ಧಿಯ ಕಾರಕ ಎಂದು ಹೇಳಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ ಮಾಡುವುದರಿಂದ ಶುಕ್ರನ ಅನುಗ್ರಹ ಲಭಿಸಿ, ಕುಟುಂಬದ ಯೋಗಕ್ಷೇಮ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
ಪೂಜೆಗೆ ಮುನ್ನ ಮಾಡಬೇಕಾದ ಸಿದ್ಧತೆ:
- ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆ ಹಾಗೂ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
- ಮನೆಯ ಮುಖ್ಯ ಬಾಗಿಲಿನ ಬಳಿ ನೀರು ತುಂಬಿದ ಚೊಂಬು ಇಟ್ಟು ಶುಭ ದೀಪ ಹಚ್ಚಿ.
- ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಭಾವಚಿತ್ರವನ್ನು ಹೂವುಗಳಿಂದ ಅಲಂಕರಿಸಿ.
- ಲಕ್ಷ್ಮೀ ದೇವಿಗೆ ಪ್ರಿಯವಾದ ಪೂಜೆ
- ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚಿ.
- ಕಮಲ ಅಥವಾ ಕೆಂಪು ಬಣ್ಣದ ಹೂವುಗಳಿಂದ ಅರ್ಚನೆ ಮಾಡಿ.
- ಲಕ್ಷ್ಮೀ ಅಷ್ಟೋತ್ತರ ಅಥವಾ ಸಹಸ್ರನಾಮ ಪಠಿಸಿ.
- ಹಾಲು, ಪಾಯಸ ಅಥವಾ ಸಕ್ಕರೆ ಪೊಂಗಲ್ ನೈವೇದ್ಯವಾಗಿ ಅರ್ಪಿಸಿ.
- ಕೊನೆಯಲ್ಲಿ ಕುಟುಂಬದೊಂದಿಗೆ ಆರತಿ ಪಡೆದು ಪ್ರಸಾದ ಸ್ವೀಕರಿಸಿ.
- ಲಕ್ಷ್ಮೀ ಕಟಾಕ್ಷಕ್ಕೆ ಸರಳ ಪರಿಹಾರ
ಶುಕ್ರವಾರ ಸಂಜೆ ಪ್ರದೋಷ ಕಾಲದಲ್ಲಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಎರಡು ದೀಪಗಳನ್ನು ಹಚ್ಚಿ, “ಓಂ ಶ್ರೀ ಮಹಾಲಕ್ಷ್ಮಿ ನಮಃ” ಮಂತ್ರವನ್ನು 108 ಬಾರಿ ಜಪಿಸಿದರೆ ಆರ್ಥಿಕ ಪ್ರಗತಿ ಹಾಗೂ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಶುಕ್ರವಾರ ಈ ಕೆಲಸಗಳನ್ನು ಮಾಡಬೇಡಿ:
- ಕಬ್ಬಿಣದ ಪಾತ್ರೆಗಳು ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ.
- ಪ್ರಮುಖ ಆಸ್ತಿ ಖರೀದಿ ಅಥವಾ ಮಾರಾಟವನ್ನು ಸಾಧ್ಯವಾದರೆ ತಪ್ಪಿಸಿ.
- ಅನಗತ್ಯವಾಗಿ ಸಾಲ ನೀಡುವುದು ಅಥವಾ ಸಾಲ ಪಡೆಯುವುದನ್ನು ತಪ್ಪಿಸಿ.
- ಮನೆ ಕೊಳಕಾಗಿ ಇಡಬೇಡಿ ಹಾಗೂ ಸಂಜೆ ದೀಪ ಹಚ್ಚಿದ ಬಳಿಕ ಕಸವನ್ನು ಹೊರಗೆ ಹಾಕಬೇಡಿ.