HomeKarnataka Newsಎಲ್‌ಪಿಜಿ ದರದಲ್ಲಿ ಕುಸಿತ! ಆಟೋ ಚಾಲಕರಿಗೆ ಬಿಗ್ ರಿಲೀಫ್, ಲೀಟರ್ ಎಸ್ಟು ಗೊತ್ತಾ?

ಎಲ್‌ಪಿಜಿ ದರದಲ್ಲಿ ಕುಸಿತ! ಆಟೋ ಚಾಲಕರಿಗೆ ಬಿಗ್ ರಿಲೀಫ್, ಲೀಟರ್ ಎಸ್ಟು ಗೊತ್ತಾ?

For Dai;y Updates Join Our whatsapp Group

ಬೆಂಗಳೂರು: ನಿರಂತರ ಎಲ್‌ಪಿಜಿ ದರ ಏರಿಕೆಯಿಂದ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಕೊನೆಗೂ ಸ್ವಲ್ಪ ನಿರಾಳ ಸಿಕ್ಕಿದೆ.

ಪ್ರಮುಖ ಇಂಧನ ವಿತರಕ ಸಂಸ್ಥೆಯಾದ ಟೋಟಲ್ ಎನರ್ಜೀಸ್ ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.

ಇದರಿಂದಾಗಿ ಆಟೋ ಎಲ್‌ಪಿಜಿ ದರವು ಈಗ ಸುಮಾರು ₹85ರ ಆಸುಪಾಸಿಗೆ ಇಳಿದಿದೆ ಎಂದು ವರದಿಯಾಗಿದೆ. ಆದರೆ ನಗರದಿಂದ ನಗರಕ್ಕೆ ಸಾಗಣೆ ವೆಚ್ಚದ ಆಧಾರದಲ್ಲಿ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರುವ ಸಾಧ್ಯತೆಯೂ ಇದೆ.

ಹಿಂದಿನ ಕೆಲವು ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಂಘರ್ಷಗಳಿಂದಾಗಿ ಕಚ್ಚಾ ತೈಲ ಮತ್ತು ಗ್ಯಾಸ್ ಪೂರೈಕೆ ಅಸ್ಥಿರಗೊಂಡಿತ್ತು. ಇದರ ಪರಿಣಾಮವಾಗಿ ಎಲ್‌ಪಿಜಿ ದರವು ದಾಖಲೆಯ ಮಟ್ಟಕ್ಕೆ ಏರಿತ್ತು. ದಿನನಿತ್ಯ ಆಟೋ ಓಡಿಸುವ ಚಾಲಕರಿಗೆ ಇದು ದೊಡ್ಡ ಆರ್ಥಿಕ ಹೊರೆ ಆಗಿತ್ತು.

ಆದರೆ ಈಗ ಜಾಗತಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸ್ಥಿರವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಇಂಧನ ಲಭ್ಯತೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹಂತ ಹಂತವಾಗಿ ದರ ಇಳಿಕೆ ಕಾಣುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಬೆಲೆ ಇಳಿಕೆಯಿಂದ ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. “ದಿನದ ಆದಾಯದಲ್ಲಿ ದೊಡ್ಡ ಭಾಗ ಗ್ಯಾಸ್‌ಗೆ ಹೋಗುತ್ತಿತ್ತು. ಈಗ ಸ್ವಲ್ಪ ಉಸಿರಾಡುವ ಅವಕಾಶ ಸಿಕ್ಕಿದೆ” ಎಂದು ಅವರು ಹೇಳಿದ್ದಾರೆ.

ಈ ದರ ಇಳಿಕೆಯಿಂದ ಸಾರ್ವಜನಿಕ ಸಾರಿಗೆ ಮೇಲಿನ ಒತ್ತಡವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img