HomeKarnataka NewsSIR ಕೆಲಸದ ಒತ್ತಡದಿಂದ ಶಿಕ್ಷಕ ಸಾವು? ಕುಟುಂಬಸ್ಥರ ಗಂಭೀರ ಆರೋಪ!

SIR ಕೆಲಸದ ಒತ್ತಡದಿಂದ ಶಿಕ್ಷಕ ಸಾವು? ಕುಟುಂಬಸ್ಥರ ಗಂಭೀರ ಆರೋಪ!

For Dai;y Updates Join Our whatsapp Group

ಬೆಳಗಾವಿ: SIR ಕಾರ್ಯದ ಒತ್ತಡದ ನಡುವೆ ಬೆಳಗಾವಿ ಜಿಲ್ಲೆಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಅಥಣಿ ಪಟ್ಟಣದ ನಿವಾಸಿ ಹಾಗೂ ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಪಡದಾಳೆ ತೋಟ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಪ್ರಕಾಶ್ ಕಾಂಬಳೆ ಮೃತಪಟ್ಟ ದುರ್ದೈವಿ.

ಕಳೆದ ಕೆಲವು ದಿನಗಳಿಂದ SIR ಕೆಲಸದ ಒತ್ತಡ ಹೆಚ್ಚಾಗಿತ್ತು. ಮನೆಗೆ ಬಂದ ಬಳಿಕವೂ “ಕೆಲಸ ಬಹಳ ಇದೆ, ಬೇಗ ಮುಗಿಸಬೇಕು” ಎಂದು ಪ್ರಕಾಶ್ ಹೇಳಿಕೊಳ್ಳುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಕಾಶ್ ಅವರ ಪತ್ನಿ ಮಾಲಾ ಮಾತನಾಡಿ, “ನನ್ನ ಗಂಡನ ಸಾವಿಗೆ ಕೆಲಸದ ಒತ್ತಡವೇ ಕಾರಣ. ಪ್ರತಿದಿನ SIR ಕೆಲಸದ ಒತ್ತಡದ ಬಗ್ಗೆ ಅವರು ಆತಂಕದಲ್ಲಿದ್ದರು” ಎಂದು ಆರೋಪಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಕಾಶ್ ಅವರು ಲೋ ಬಿಪಿ ಕಾರಣದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಸಾವಿಗೆ SIR ಕಾರ್ಯದ ಒತ್ತಡ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಥಣಿ ಪಟ್ಟಣದ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img