HomeBengaluru Newsಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ದರ ದಿಢೀರ್ ಏರಿಕೆ: ಸೆಪ್ಟೆಂಬರ್‌ 1ರಿಂದ ಹೊಸ ದರ ಜಾರಿ

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ದರ ದಿಢೀರ್ ಏರಿಕೆ: ಸೆಪ್ಟೆಂಬರ್‌ 1ರಿಂದ ಹೊಸ ದರ ಜಾರಿ

For Dai;y Updates Join Our whatsapp Group

ಚಾಮರಾಜನಗರ: ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ರಾಜ್ಯದ ಪ್ರಸಿದ್ಧ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬಸ್‌, ಜೀಪ್‌ ಸಫಾರಿ, ಕ್ಯಾಮೆರಾ ಬಳಕೆ ಶುಲ್ಕ ಹಾಗೂ ವಾಹನ ನಿಲುಗಡೆ ಶುಲ್ಕ ಸೇರಿದಂತೆ ವಿವಿಧ ಸೇವೆಗಳ ದರ ಬಹುತೇಕ ದ್ವಿಗುಣಗೊಳಿಸಲಾಗಿದೆ.

ಸೆಪ್ಟೆಂಬರ್‌ 1ರಿಂದ ಪರಿಷ್ಕೃತ ಸಫಾರಿ ದರಗಳು ಜಾರಿಗೆ ಬರಲಿವೆ. ಬಂಡೀಪುರ ಹಾಗೂ ನಾಗರಹೊಳೆ ಎರಡೂ ಅಭಯಾರಣ್ಯಗಳಲ್ಲಿ ಹೊಸ ದರ ಅನ್ವಯವಾಗಲಿದೆ.

ಬಂಡೀಪುರದಲ್ಲಿ ಬಸ್‌ ಸಫಾರಿಗೆ ವಯಸ್ಕರ ಟಿಕೆಟ್‌ ದರವನ್ನು ₹650ರಿಂದ ₹1,000ಕ್ಕೆ ಹೆಚ್ಚಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ₹350ರಿಂದ ₹500ಕ್ಕೆ ಏರಿಕೆ ಮಾಡಲಾಗಿದೆ.

ಜೀಪ್‌ ಸಫಾರಿಗೆ ವಯಸ್ಕರ ದರ ₹750ರಿಂದ ₹1,500ಕ್ಕೆ ಹೆಚ್ಚಿಸಲಾಗಿದ್ದು, ಮಕ್ಕಳಿಗೆ ₹750 ದರ ನಿಗದಿ ಮಾಡಲಾಗಿದೆ. ಈ ದರದಲ್ಲಿ ನೇಚರ್‌ ಗೈಡ್‌ ಶುಲ್ಕವೂ ಸೇರಿರುತ್ತದೆ.

ಕ್ಯಾಮೆರಾ ಬಳಕೆಗೂ ಹೊಸ ಶುಲ್ಕ

ಸಫಾರಿ ವೇಳೆ ಕ್ಯಾಮೆರಾ ಬಳಕೆಗೆ ಹೊಸ ನಿಯಮ ಜಾರಿಗೊಳಿಸಲಾಗಿದೆ. 200 ಎಂಎಂವರೆಗೆ ಲೆನ್ಸ್‌ ಹೊಂದಿರುವ ಕ್ಯಾಮೆರಾಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ 200 ಎಂಎಂಗಿಂತ ಹೆಚ್ಚಿನ ಲೆನ್ಸ್‌ ಹೊಂದಿರುವ ಕ್ಯಾಮೆರಾಗಳಿಗೆ ₹1,500 ಜೊತೆಗೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಬಂಡೀಪುರದಲ್ಲಿ ಸ್ವಂತ ಜೀಪ್‌, ಎಲ್‌ಸಿವಿ ಅಥವಾ ಬೋಟ್‌ ಮೂಲಕ ಅನುಮತಿ ಪಡೆದ ಪ್ರದೇಶಗಳಿಗೆ ಪ್ರವೇಶಿಸುವವರಿಗೂ ಹೊಸ ದರ ನಿಗದಿ ಮಾಡಲಾಗಿದೆ.

  • ವಯಸ್ಕರಿಗೆ – ₹600
  • ಮಕ್ಕಳಿಗೆ – ₹300
  • ಜೀಪ್‌ – ₹2,500
  • ಲಘು ವಾಣಿಜ್ಯ ವಾಹನ – ₹3,500
  • ಬೋಟ್‌ – ₹3,500

ನಾಗರಹೊಳೆಯಲ್ಲಿ ಹೊಸ ಸಫಾರಿ ದರ

ನಾಗರಹೊಳೆಯಲ್ಲೂ ಸಫಾರಿ ದರ ಹೆಚ್ಚಳ ಮಾಡಲಾಗಿದೆ.

  • ಬಸ್‌ ಸಫಾರಿ: ವಯಸ್ಕರಿಗೆ ₹1,000, ಮಕ್ಕಳಿಗೆ ₹500
  • ಜೀಪ್‌ ಸಫಾರಿ: ವಯಸ್ಕರಿಗೆ ₹1,500, ಮಕ್ಕಳಿಗೆ ₹750
  • 200 ಎಂಎಂಗಿಂತ ಹೆಚ್ಚಿನ ಲೆನ್ಸ್‌ ಕ್ಯಾಮೆರಾ: ₹1,500

ವಾಹನ ನಿಲುಗಡೆ ಶುಲ್ಕದಲ್ಲೂ ಹೆಚ್ಚಳ ಮಾಡಲಾಗಿದ್ದು,

  • ಕಾರು – ₹100
  • ಲಘು ವಾಹನ – ₹200
  • ಬಸ್‌ – ₹300 ನಿಗದಿ ಮಾಡಲಾಗಿದೆ.
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img