HomeKarnataka NewsASDDO ಪಟ್ಟಿಗೆ 1.11 ಕೋಟಿ ಮತದಾರರು ಸೇರ್ಪಡೆ; ಹೆಸರು ಉಳಿಸಿಕೊಳ್ಳಲು ತಕ್ಷಣ ಫಾರ್ಮ್-6 ಸಲ್ಲಿಸುವಂತೆ ಚುನಾವಣಾ...

ASDDO ಪಟ್ಟಿಗೆ 1.11 ಕೋಟಿ ಮತದಾರರು ಸೇರ್ಪಡೆ; ಹೆಸರು ಉಳಿಸಿಕೊಳ್ಳಲು ತಕ್ಷಣ ಫಾರ್ಮ್-6 ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ

For Dai;y Updates Join Our whatsapp Group

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಸುಮಾರು 1.11 ಕೋಟಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.80ರಷ್ಟು ಎನ್ಯುಮರೇಷನ್ ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಒಟ್ಟು 1,11,04,705 ಮತದಾರರನ್ನು ASDDO (Absentee, Shifted, Dead, Duplicate and Others) ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿರುವವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಮುಂದುವರಿಯಬೇಕಾದರೆ ಫಾರ್ಮ್-6 ಸಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರು ಇದ್ದು, ಈ ಪೈಕಿ 4.43 ಕೋಟಿ ಮತದಾರರು ಗಣತಿ ನಮೂನೆಯನ್ನು ಭರ್ತಿ ಮಾಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಮತದಾರರು ASDDO ಪಟ್ಟಿಗೆ ಸೇರ್ಪಡೆಯಾಗಿರುವುದು ಗಮನಾರ್ಹವಾಗಿದೆ ಎಂದು ಅವರು ಹೇಳಿದರು.

ಆಗಸ್ಟ್ 8ರಂದು ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಳ್ಳಲಿದೆ. ಗಣತಿ ನಮೂನೆ ಸಿಗದವರು ಅಥವಾ ಸ್ಥಳಾಂತರಗೊಂಡಿರುವ ಸುಮಾರು 80 ಲಕ್ಷಕ್ಕೂ ಹೆಚ್ಚು ಮತದಾರರು ಆತಂಕಪಡುವ ಅಗತ್ಯವಿಲ್ಲ. ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್-6 ಸಲ್ಲಿಸುವ ಮೂಲಕ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಅನ್ಬುಕುಮಾರ್ ಅವರ ಪ್ರಕಾರ, ರಾಜ್ಯದ 57,787 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. 175 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಪೂರ್ಣ ಕೆಲಸ ಮುಗಿದಿದ್ದು, 49 ಕ್ಷೇತ್ರಗಳಲ್ಲಿ ಶೇ.90ರಿಂದ 100ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಲದೆ, 19 ಜಿಲ್ಲೆಗಳಲ್ಲಿ ಶೇ.100 ಹಾಗೂ 15 ಜಿಲ್ಲೆಗಳಲ್ಲಿ ಶೇ.90ಕ್ಕೂ ಹೆಚ್ಚು ಕಾರ್ಯ ಪೂರ್ಣಗೊಂಡಿದೆ.

ಎಸ್‌ಐಆರ್ ಪ್ರಕ್ರಿಯೆಯ ಪ್ರಮುಖ ಅಂಕಿ-ಅಂಶಗಳು

  • ಒಟ್ಟು ಗಣತಿ ನಮೂನೆಗಳ ಹಂಚಿಕೆ: 5,54,32,314
  • ಸ್ವೀಕೃತ ನಮೂನೆಗಳು: 4,43,04,632
  • ASDDO ಪಟ್ಟಿಯಲ್ಲಿರುವ ಮತದಾರರು: 1,11,04,705 (ಶೇ.20.03)

ASDDO ಪಟ್ಟಿಯಲ್ಲಿ ಯಾರು?

  • ಶಾಶ್ವತವಾಗಿ ಸ್ಥಳಾಂತರಗೊಂಡವರು: 66,64,943
  • ಪತ್ತೆಯಾಗದವರು: 16,30,012
  • ಮೃತಪಟ್ಟವರು: 16,30,872
  • ಎರಡು ಕಡೆ ಹೆಸರು ಹೊಂದಿರುವವರು: 6,89,904
  • ಮಾಹಿತಿ ನೀಡಲು ನಿರಾಕರಿಸಿದವರು: 4,88,974

ಬೆಂಗಳೂರಿನಲ್ಲಿ ASDDO ಪಟ್ಟಿಯಲ್ಲಿರುವ ಮತದಾರರು

  • ಬೆಂಗಳೂರು ದಕ್ಷಿಣ: 11,07,678 (ಒಟ್ಟು ಮತದಾರರು: 21,44,784)
  • ಬೆಂಗಳೂರು ಉತ್ತರ: 11,07,027 (ಒಟ್ಟು ಮತದಾರರು: 23,32,621)
  • ಬೆಂಗಳೂರು ಕೇಂದ್ರ: 9,15,035 (ಒಟ್ಟು ಮತದಾರರು: 18,89,919)
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img