ವಿಜಯಸಾಕ್ಷಿ ಸುದ್ದಿ, ಗದಗ: ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗಬೇಕಾದರೆ ಬೂತ್ ಮಟ್ಟದಿಂದಲೇ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಸಂಘಟನೆಗೆ ಚುರುಕು ನೀಡಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಕರೆ ನೀಡಿದರು.
ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಬೂತ್‌ನಲ್ಲೂ ಯುವ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ, ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ್ ಪಾಟೀಲ, ಅಕ್ಷತಾ ರವಿಕುಮಾರ್, ಸೂರಜ್ ಅವಾಟಿ, ಉದಯ್ ವೀರನಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ್ ಮಂದಾಲಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಘವೇಂದ್ರ ದೊಡ್ಡಮನಿ, ವೀಣಾ ಹಿರೇಮಠ, ಶರಣಪ್ಪ ಗವಾರಿ, ಅಹಮದ್ ಖಾಜಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಚಲವಾದಿ, ರವಿ ಮೆಟಗುಡ್ಡ, ಹಸನಸಾಬ ಜಂಗ್ಲಿ, ಎಚ್.ಡಿ. ನದಾಫ, ಉಮರ್ ಫಾರೂಕ್ ಬಾರಿಗಿಡದ ಉಪಸ್ಥಿತರಿದ್ದರು.
ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುತ್ತು ಮುಳವಾಡ, ನರಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೀರೇಶ್ ಚುಳುಕಿ, ಗದಗ-ಬೆಟಗೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರಭಾಷಾ ಕೆ. ನದಾಫ, ಮುಳಗುಂದ ಬ್ಲಾಕ್ ಅಧ್ಯಕ್ಷ ಅಜ್ಜಪ್ಪ ಹುಗ್ಗನ್ನವರ, ನರಗುಂದ ಬ್ಲಾಕ್ ಅಧ್ಯಕ್ಷ ಸುನೀಲ ಕಳಸನ್ನವರ, ಶಿರಹಟ್ಟಿ ಬ್ಲಾಕ್ ಅಧ್ಯಕ್ಷ ಸಂತೋಷ್ ರೆಡ್ಡಿ, ಹೊಳೆಆಲೂರ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಗುಂಜಾಳ, ರೋಣ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ರಾಥೋಡ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಹರ ಸೇವಾದಳ ಅಧ್ಯಕ್ಷ ಮೊಹಮ್ಮದ್ ಬೆಟಗೇರಿ ಹಾಗೂ ಶೃತಿ ಕಮತರ, ಚಂದ್ರಶೇಖರ ಕಡಕೋಳ, ಅಭಿಷಯ ಅಬ್ನಿಸ್, ಕಿರಣ್ ಮಾಕಾಪುರ, ಶಾರುಖ್ ಹುಯಿಲ್‌ಗೋಳ, ಹಸನ್ ಓಲೆಕಾರ್, ರವಿ ಹಾದಿಮನಿ, ನಾವೀದು ಸಿದ್ದಾಪುರ, ಮಹೇಶ್ ಹೊಸಳ್ಳಿ, ರಝಾ ಡಂಬಳ, ಮಹೇಶ ದೊಡ್ಡಮನಿ, ಚನ್ನು ಬ್ಯಾಹಟ್ಟಿ, ರಾಜೇಸಾಬ ಪಿಂಜಾರ, ಸೋಮು ನಾಗರಾಜ, ಗೋಪಿ ರಾಯನಗೌಡ್ರ, ಮಹೇಶ ಕಳಸನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಪಕ್ಷದ ನಿಜವಾದ ಶಕ್ತಿ ಬೂತ್ ಮಟ್ಟದ ಕಾರ್ಯಕರ್ತರು. ಪ್ರತಿಯೊಂದು ಬೂತ್‌ನಲ್ಲೂ ಸಂಘಟನೆ ಬಲಪಡಿಸಿ, ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು.”
ಕೃಷ್ಣಗೌಡ ಎಚ್. ಪಾಟೀಲ



