HomeGadag Newsಜಿ.ಎಸ್. ಪಾಟೀಲರಿಗೆ ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯಿಂದ ಗೌರವ

ಜಿ.ಎಸ್. ಪಾಟೀಲರಿಗೆ ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯಿಂದ ಗೌರವ

For Dai;y Updates Join Our whatsapp Group

ಶಿಕ್ಷಣ ಸಮಿತಿಗೆ ಜೀವ ಇರುವವರೆಗೂ ಚಿರಋಣಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಅದರ ಅಂಗಸಂಸ್ಥೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಸಂಕಲ್ಪ ಮಾಡಬೇಕು. ಆಗ ಮಾತ್ರ ತಾವು ಸನ್ಮಾನ ಸ್ವೀಕರಿಸಿದಕ್ಕೆ ನಿಜವಾದ ಸಂತೃಪ್ತಿ ಸಿಗುತ್ತದೆ ಎಂದು ವಿಧಾನಸಭೆಯ ನೂತನ ಸಭಾಧ್ಯಕ್ಷರು ಹಾಗೂ ಡಾ. ಪಂ. ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಜಿ.ಎಸ್. ಪಾಟೀಲ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ಡಾ. ಪಂ. ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಹಾಗೂ ಅಂಗಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಿತಿಯ ಅಭಿವೃದ್ಧಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದ ಅವರು, ಈ ಸನ್ಮಾನಕ್ಕೆ ಜೀವ ಇರುವವರೆಗೂ ಸಮಿತಿಗೆ ಚಿರಋಣಿಯಾಗಿರುತ್ತೇನೆ ಎಂದರು. ಶ್ರೀಮಠದಲ್ಲಿ ತುಲಾಭಾರ ನಡೆಸುವುದರಿಂದ ಅಂಧ, ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ನೆರವಾಗಲಿದೆ ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಶಾಸಕ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧರು ಹಾಗೂ ಅನಾಥರಿಗೆ ಸಂಗೀತ ಶಿಕ್ಷಣ ನೀಡಿ ಸ್ವಾಭಿಮಾನದಿಂದ ಬದುಕುವ ದಾರಿ ತೋರಿಸಿದೆ. ನೈಜ ಬದುಕಿಗೆ ಅಗತ್ಯವಾದ ಕೌಶಲ್ಯ ಕಲಿಸುವ ಮೂಲಕ ಮಾನವ ಹಕ್ಕುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.

ಜಿ.ಎಸ್. ಪಾಟೀಲ ಅವರು ಸುಮಾರು 50 ವರ್ಷಗಳ ರಾಜಕೀಯ ಅನುಭವ ಹೊಂದಿದ್ದು, ಸಭಾಧ್ಯಕ್ಷರಾದ ಬಳಿಕ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಧ್ವನಿ ಎತ್ತುತ್ತಿದ್ದಾರೆ. ಅಂಧರ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದು, ಅವರಿಂದ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಶಿರಹಟ್ಟಿಯ ಪಕ್ಕೀರೇಶ್ವರ ಬಾವೈಕ್ಯತಾ ಪೀಠದ ಜಗದ್ಗುರು ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ವ್ಯಕ್ತಿಯ ಅಧಿಕಾರಕ್ಕಿಂತ ವ್ಯಕ್ತಿತ್ವಕ್ಕೆ ಗೌರವ ನೀಡಬೇಕು. ಜಿ.ಎಸ್. ಪಾಟೀಲ ಹಾಗೂ ಎಚ್.ಕೆ. ಪಾಟೀಲ ಅವರು ಗದಗ ಜಿಲ್ಲೆಗೆ ಎರಡು ಕಣ್ಣುಗಳಿದ್ದಂತೆ. ಸೋಲಿನಲ್ಲಿ ಕುಗ್ಗದೆ, ಗೆಲುವಿನಲ್ಲಿ ಹಿಗ್ಗದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ಗುರುಗಳ ಸೇವೆಗೆ ಜಿ.ಎಸ್. ಪಾಟೀಲ ಹಾಗೂ ಎಚ್.ಕೆ. ಪಾಟೀಲ ಅವರು ಉತ್ತಮ ಉದಾಹರಣೆ. ಇಬ್ಬರೂ ಜಿಲ್ಲೆಗೆ ಜೋಡೆತ್ತುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಸಂಸ್ಥೆಯ ಸಿಬ್ಬಂದಿಗೆ ಆಶ್ರಯದಾತರಾಗಬೇಕು ಎಂದರು.

ಡಾ. ಪಿಜಿಎಎಸ್ ಸಮಿತಿಯ ಉಪಾಧ್ಯಕ್ಷ ಡಾ. ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ ಮಾತನಾಡಿ, ಪಂ. ಪುಟ್ಟರಾಜ ಗವಾಯಿಗಳು ಜಿ.ಎಸ್. ಪಾಟೀಲ ಅವರಿಗೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಎಸ್.ಎಂ. ಗೌಡರ, ರಾಜಣ್ಣ ಗುಡಿಮನಿ, ಅಪ್ಪಣ್ಣ ಇನಾಮತಿ ಮಾತನಾಡಿದರು. ವೇದಿಕೆಯಲ್ಲಿ ಐ.ಎಸ್. ಪಾಟೀಲ, ಶಿವರುದ್ರಪ್ಪ ಇಟಗಿ, ವಿ.ಬಿ. ಸೋಮನಕಟ್ಟಿ, ಗಂಗಾ ಚಕ್ರಣ್ಣವರ, ಮಹೇಶ್ವರ ಸ್ವಾಮೀಜಿ, ಬಿ.ಬಿ. ಅಸೂಟಿ, ಪ್ರಭು ಅರವಟಿಗಿಮಠ, ಎಸ್.ಎನ್. ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂಧರ ವಸತಿಯುತ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಈ ಸನ್ಮಾನಕ್ಕೆ ನಾನು ಜೀವ ಇರುವವರೆಗೂ ಸಮಿತಿಗೆ ಚಿರಋಣಿಯಾಗಿರುತ್ತೇನೆ. ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಅದರ ಅಂಗಸಂಸ್ಥೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು.-— ಜಿ.ಎಸ್. ಪಾಟೀಲ, ವಿಧಾನಸಭೆಯ ಸಭಾಧ್ಯಕ್ಷರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img