ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಉನ್ನತ ಶಿಕ್ಷಣ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಸಾರ್ವಜನಿಕವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳ ಪಥಸಂಚಲನ ವೀಕ್ಷಿಸಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಶಾಸಕ ಡಾ. ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ, ಪೊಲೀಸ್ ಹಾಗೂ ಭದ್ರತಾ ಪಡೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶಿಸ್ತುಬದ್ಧ ಪಥಸಂಚಲನದಲ್ಲಿ ಪಾಲ್ಗೊಂಡರು.
ಶಾಲಾ ವಿಭಾಗದಲ್ಲಿ ಯಾರಿಗೆ ಯಾವ ಸ್ಥಾನ?
ಪಥಸಂಚಲನದ ಶಾಲಾ ವಿಭಾಗದಲ್ಲಿ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಎಸ್.ಎಂ.ಕೆ. ನಗರ, ಗದಗ ಪ್ರಥಮ ಸ್ಥಾನ ಪಡೆದರೆ, ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆ, ಗದಗ ದ್ವಿತೀಯ ಹಾಗೂ ಅಕ್ಷರ ಟೆಕ್ನೋ ಬಾಲಕಿಯರ ಪ್ರೌಢಶಾಲೆ, ಗದಗ ತೃತೀಯ ಸ್ಥಾನ ಪಡೆದುಕೊಂಡವು.
ವಿವಿಧ ಪಡೆಗಳ ವಿಭಾಗದಲ್ಲಿ ಅರಣ್ಯ ಘಟಕ ಪ್ರಥಮ, ಗೃಹರಕ್ಷಕ ದಳ ದ್ವಿತೀಯ ಹಾಗೂ ಎನ್‌ಸಿಸಿ ಸೀನಿಯರ್ ಬಾಯ್ಸ್ ತೃತೀಯ ಸ್ಥಾನ ಗಳಿಸಿದವು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ
ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಲೆ, ಸಾಹಿತ್ಯ, ಸಂಗೀತ, ಆಡಳಿತ, ಕೃಷಿ, ಸಮಾಜಸೇವೆ, ಶಿಕ್ಷಣ, ಆರೋಗ್ಯ, ಪತ್ರಿಕೋದ್ಯಮ, ಎನ್‌ಸಿಸಿ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಕಲೆ, ಸಾಹಿತ್ಯ, ಸಂಗೀತ, ಆಡಳಿತ, ಕೃಷಿ ಹಾಗೂ ಸಮಾಜಸೇವೆ ವಿಭಾಗದಲ್ಲಿ ಮಾರುತಿ ಜೋಗದಂಡಕರ, ವಿಶ್ವನಾಥ ಬಡಿಗೇರ, ಮಂಜುನಾಥ ಬಂಡಿಹಾಳ, ಜಾಫರ್ ಬಚೇರಿ, ಕಾಶಿಮಸಾಬ ಮುಜಾವರ, ಭಾಗ್ಯಶ್ರೀ ಹಳ್ಳಿಕೇರಿಮಠ, ಬ್ರಹ್ಮಕುಮಾರಿ ಡಾ. ಪ್ರಭಾವತಿ ಅಕ್ಕನವರು, ವೇ. ಚನ್ನವೀರಯ್ಯ ಹಿರೇಮಠ, ಶಿವಾಜಿ ಚವ್ಹಾಣ, ಬಸಪ್ಪ ಮುಸಕಿನ ಬಾವಿ ಹಾಗೂ ವಿರುಪಾಕ್ಷಪ್ಪ ಅಕ್ಕಿ ಅವರನ್ನು ಗೌರವಿಸಲಾಯಿತು.
ಶಿಕ್ಷಣ ಮತ್ತು ಆರೋಗ್ಯ ವಿಭಾಗದಲ್ಲಿ ಕಾಶಿನಾಥ ಶಿರಬಡಗಿ, ಕಳಕಪ್ಪ ಮುದ್ಲಾಪುರ, ಅಂದಾನಪ್ಪ ಬರಡಿ, ಡಾ. ವೆಂಕಟೇಶ ರಾಠೋಡ, ದೇವೇಂದ್ರ ಕಳಸಾಪುರ ಹಾಗೂ ಡಾ. ಪ್ಯಾರ್ ಅಲಿ ನೂರಾನಿ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆನಂದ ಸಾಲಿಗ್ರಾಮ, ಲಿಂಗನಗೌಡ ಹನುಮನಗೌಡರ, ಫಾರೂಕ್ ಮಕಾನದಾರ, ನಾಗರಾಜ ಕಟ್ಟಿಮನಿ ಹಾಗೂ ಎಚ್.ಎಂ. ಶರೀಫನವರ ಅವರಿಗೆ ಸನ್ಮಾನ ದೊರೆಯಿತು.

ಎನ್‌ಸಿಸಿ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಹಲವು ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯಲ್ಲಮ್ಮ ಜಾಧವ, ಆಕಾಶಗೌಡ ಮರಿಗೌಡರ, ಅಕ್ಷತಾ ಹುಚ್ಚನಗೌಡ್ರ, ಸಮೃದ್ಧಿ ಸಿದ್ಧಲಿಂಗ, ಪ್ರಜ್ವಲಕುಮಾರ್ ಪೂಜಾರ, ಸಂಧ್ಯಾ ಲಮಾಣಿ, ಸಾರಂಗಮಠ, ಪ್ರವೀಣಕುಮಾರ್ ಸೊಬಗಿನ, ಸುಷ್ಮಾ ನಾಯಕ, ಪದ್ಮಾವತಿ ಶಾಬಾದಿ, ಸ್ನೇಹಾ ಕರ್ಜಗಿ, ಕಾರ್ತಿಕ ರೆಡ್ಡಿ ಕಾಮರೆಡ್ಡಿ, ಹರ್ಷಿಯಾ ಷಹಾಮುಲ್ಲಾ, ಅಲಿಯಾ ಮುಕ್ತುಂಸಾಬ, ಅರ್ಪಿನಬಾನು ಗುಡಿಸಲಮನಿ, ತನುಜಾ ಗೋಪೆಣ್ಣವರ, ಕೀರ್ತನಾ ಅವರೆಡ್ಡಿ, ಪವಿತ್ರಾ ದಪ್ಪರದಾರ, ಗೀತಾ ಉಪ್ಪಾರ, ಶೈಲಾಪವಾಡಿ, ಅಕ್ಷತಾ ಮಂಡಲಗೇರಿ, ರಾಹುಲ ಕಾರಭಾರಿ, ಮಾಲತಿ ಇನಾಮತಿ, ರಿಯಾಜ ಬನಿ, ದೇವಮ್ಮ, ಆನಂದ ಬೇಂದ್ರೆ, ಸೋಮಶೇಖರ ಬಿಚಗಲ್, ಚೇತನಕುಮಾರ್ ಅಮ್ರದ, ಮಹಾಂತೇಶ ಬೇವೂರ, ಚಂದ್ರಪ್ಪ ಬರಮಣ್ಣವರ, ನಾಶಿರುದ್ದೀನ ಮಕಾನದಾರ, ಮನೀಶಾ ಕಬ್ಬೂರ, ಪ್ರಿಯಾಂಕಾ ಲಮಾಣಿ, ಭಾಗ್ಯಾ ಮೇಲ್ಮನಿ ಹಾಗೂ ರಿಯಾನ ಅಹ್ಮದ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆ., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಕರ್ಷಿಸಿದ ಪಥಸಂಚಲನ
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನೇತೃತ್ವವನ್ನು ಆರ್‌ಎಸ್‌ಐ ಬಿಷ್ಠಪ್ಪ ತಳವಾರ, ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ ಹಾಗೂ ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಜಿ.ಕೆ. ವಹಿಸಿದ್ದರು.
ಅರಣ್ಯ ರಕ್ಷಕ ಪಡೆಯನ್ನು ಆರ್‌ಎಫ್‌ಒ ಸಚಿನ ಬಿಸನಳ್ಳಿ, ಎನ್‌ಸಿಸಿ ಸೀನಿಯರ್ ಬಾಯ್ಸ್ ವಿಭಾಗದಲ್ಲಿ 38 ಕೆಎಆರ್ ಬಟಾಲಿಯನ್‌ನ ಕುಮಾರ ವೆಂಕಟೇಶ ಹೊಸಮನಿ ಹಾಗೂ ಎನ್‌ಸಿಸಿ ಸೀನಿಯರ್ ಗರ್ಲ್ಸ್ ವಿಭಾಗದಲ್ಲಿ ಕುಮಾರಿ ರೇಷ್ಮಾ ಕಾರಭಾರಿ ಮುನ್ನಡೆಸಿದರು.
ಗೈಡ್ಸ್, ಸ್ಕೌಟ್ಸ್, ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು.



