HomeKarnataka Newsಬೆಂಗಳೂರಲ್ಲಿ 446 ಅಕ್ರಮ ವಿದೇಶಿಗರು: ಸದನದಲ್ಲಿ ಗೃಹ ಇಲಾಖೆಯಿಂದ ಸ್ಫೋಟಕ ಮಾಹಿತಿ

ಬೆಂಗಳೂರಲ್ಲಿ 446 ಅಕ್ರಮ ವಿದೇಶಿಗರು: ಸದನದಲ್ಲಿ ಗೃಹ ಇಲಾಖೆಯಿಂದ ಸ್ಫೋಟಕ ಮಾಹಿತಿ

For Dai;y Updates Join Our whatsapp Group

ಬೆಂಗಳೂರು: ನಗರದಲ್ಲಿ ಅಕ್ರಮ ವಿದೇಶ ನುಸುಳುಕೋರರು ಇರುವುದಾಗಿ ಖುದ್ದು ಸರ್ಕಾರ ಒಪ್ಪಿಕೊಂಡಿದೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಇಲಾಖೆ ಸಚಿವರು ಉತ್ತರ ನೀಡಿದ್ದಾರೆ.

ಅಕ್ರಮ ವಲಸಿಗ ನುಸುಳುಕೋರರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಸ್ಫೋಟಕ ಮಾಹಿತಿಯನ್ನು ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ವೀಸಾ, ಪಾಸ್‌ಪೋರ್ಟ್ ಅವಧಿ ಇರುವ ವಿದೇಶಿಗರು 5,304 ಜನ ಇದ್ದಾರೆ.

ವೀಸಾ, ಪಾಸ್‌ಪೋರ್ಟ್ ಅವಧಿ ಮೀರಿದ್ದರೂ ಅಕ್ರಮವಾಗಿ 446 ವಿದೇಶಿಗರು ಇದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 3 ವರ್ಷಗಳಲ್ಲಿ ದೇಶದೊಳಗೆ ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಮಾಹಿತಿ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದ್ದು, ಆದರೆ 3 ವರ್ಷಗಳಲ್ಲಿ 911 ಜನ ಅಕ್ರಮ ವಲಸಿಗರನ್ನು ಇಲಾಖೆ ಗುರುತಿಸಿದೆ.

ಇದರಲ್ಲಿ ಬಾಂಗ್ಲಾದೇಶದ 868, ಪಾಕಿಸ್ತಾನದ 20, ನೈಜೀರಿಯಾದ 13, ಶ್ರೀಲಂಕಾದ 8, ಮಯನ್ಮಾರ್‌ನ 1 ಹಾಗೂ ಉಗಾಂಡಾದ ಒಬ್ಬರು ಸೇರಿದ್ದಾರೆ. 31 ದೇಶಗಳ 365 ವಿದೇಶಿಗರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯನ್ನೂ ಗೃಹ ಇಲಾಖೆ ಸದನಕ್ಕೆ ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img