ನವದೆಹಲಿ: ಆಪಲ್ ಕಂಪನಿ ಐಫೋನ್‌ನ ಮುಂಬರುವ 18ರ ಸರಣಿಯನ್ನು ಬಿಡುಗಡೆ ಮಾಡುವ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 9ರಂದು ಲಾಂಚ್ ಇವೆಂಟ್ ನಡೆಯಲಿದ್ದು, ಹಲವು ಹೊಸ ಪ್ರಾಡಕ್ಟ್‌ಗಳು ರಿಲೀಸ್ ಆಗಲಿವೆ. ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಕುರಿತು ಆಪಲ್ ಕಂಪನಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ “ಸರ್ಪ್ರೈಸ್ ಅಂಡ್ ಶೈನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಲಾಂಚ್ ಇವೆಂಟ್ ನಡೆಯಲಿದೆ ಎಂದು ತಿಳಿಸಿದೆ.
ಐಫೋನ್ ಪ್ರಿಯರು ಸೆ.9ರಂದು ಐಫೋನ್ 18ರ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಂಪನಿ ಈ ಬಗ್ಗೆ ನಿಖರ ಮಾಹಿತಿ ಹಂಚಿಕೊಂಡಿಲ್ಲ, ಬದಲಿಗೆ ಏನೆಲ್ಲಾ ಬಿಡುಗಡೆಯಾಗಬಹುದು ಎಂಬ ಪಟ್ಟಿಯನ್ನಷ್ಟೇ ನೀಡಿದೆ.
ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್, ಐಫೋನ್ ಫೋಲ್ಡ್, ಆಪಲ್ ವಾಚ್ ಸೀರೀಸ್ 12, ಆಪಲ್ ವಾಚ್ ಅಲ್ಟ್ರಾ 4, ಏರ್‌ಪಾಡ್ 6, ಐಪ್ಯಾಡ್ ಮಿನಿ, ಹೋಮ್‌ಪಾಡ್ ಮಿನಿ 2, ಆಪಲ್ ಟಿವಿ 4ಕೆ, ಆಪಲ್ ಹೋಮ್ ಹಬ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಪಟ್ಟಿ ಮಾಡಲಾಗಿದೆ. ಲಾಂಚ್ ಇವೆಂಟ್ ಯೂಟ್ಯೂಬ್, ಆಪಲ್ ವೆಬ್‌ಸೈಟ್ ಮತ್ತು ಆಪಲ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.



