ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.
ನಗರದ ಕೆಆರ್ ಮಾರ್ಕೆಟ್‌ನಲ್ಲಿ ಹೂವು, ಹಣ್ಣು ಹಾಗೂ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಹೂವು, ತೋರಣ ಸೇರಿದಂತೆ ಹಲವು ವಸ್ತುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ಸಿದ್ಧತೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಸೇವಂತಿಗೆ ಹೂವು ಕೆ.ಜಿ.ಗೆ ₹350, ತಾವರೆ ಹೂವು ಜೋಡಿಗೆ ₹50 ಹಾಗೂ ಬಟನ್ ಗುಲಾಬಿ ಕೆ.ಜಿ.ಗೆ ₹350 ಇದೆ. ಮಿಕ್ಸ್ ಹೂವು ಕೆ.ಜಿ.ಗೆ ₹300ರಿಂದ ₹400ರ ವರೆಗೆ ಮಾರಾಟವಾಗುತ್ತಿದೆ.
ಕನಕಾಂಬರ ಮೊಳಕ್ಕೆ ₹50 ಹಾಗೂ ಕೆ.ಜಿ.ಗೆ ₹2,000, ಮಲ್ಲಿಗೆ ಮೊಳಕ್ಕೆ ₹50 ಹಾಗೂ ಕೆ.ಜಿ.ಗೆ ₹1,000 ದರವಿದೆ. ತುಳಸಿ ತೋರಣ ಮೊಳಕ್ಕೆ ₹60, ಮಾವಿನ ಎಲೆ ಕಟ್ಟು ₹10ರಿಂದ ₹30 ಹಾಗೂ ಬಾಳೆ ದಿಂಡು ಜೋಡಿಗೆ ₹50ರಿಂದ ₹80ರ ವರೆಗೆ ಇದೆ.
ಹಣ್ಣುಗಳ ದರ ಎಷ್ಟು?
ಸೇಬು ಕೆ.ಜಿ.ಗೆ ₹200ರಿಂದ ₹300, ದಾಳಿಂಬೆ ₹100ರಿಂದ ₹250, ಸಪೋಟ ₹150ರಿಂದ ₹200 ಹಾಗೂ ದ್ರಾಕ್ಷಿ ₹120ರಿಂದ ₹150ರ ವರೆಗೆ ಮಾರಾಟವಾಗುತ್ತಿದೆ.
ಮೂಸಂಬಿ ಹಾಗೂ ಕಿತ್ತಳೆ ಕೆ.ಜಿ.ಗೆ ₹80ರಿಂದ ₹100 ಮತ್ತು ಬಾಳೆಹಣ್ಣು ₹80ರಿಂದ ₹150ರ ವರೆಗೆ ಇದೆ.
ತರಕಾರಿ ದರವೂ ಹೀಗಿದೆ
ಈರುಳ್ಳಿ ಕೆ.ಜಿ.ಗೆ ₹60ರಿಂದ ₹70, ಹಸಿಮೆಣಸಿನಕಾಯಿ ₹40ರಿಂದ ₹60, ಬೀಟ್‌ರೂಟ್ ₹50ರಿಂದ ₹60 ಹಾಗೂ ಬೆಳ್ಳುಳ್ಳಿ ₹200ರಿಂದ ₹250ರ ವರೆಗೆ ಇದೆ.
ನಿಂಬೆಹಣ್ಣು ಒಂದಕ್ಕೆ ₹8ರಿಂದ ₹15, ನುಗ್ಗೆಕಾಯಿ ಒಂದಕ್ಕೆ ₹10ರಿಂದ ₹15, ಕ್ಯಾಪ್ಸಿಕಂ ಕೆ.ಜಿ.ಗೆ ₹50ರಿಂದ ₹70 ಹಾಗೂ ಬಟಾಣಿ ₹140ರಿಂದ ₹160ರ ವರೆಗೆ ಮಾರಾಟವಾಗುತ್ತಿದೆ.
ದಿನಸಿ ವಸ್ತುಗಳ ದರ
ಬೆಲ್ಲ ಕೆ.ಜಿ.ಗೆ ₹50ರಿಂದ ₹55, ತೊಗರಿಬೇಳೆ ₹160ರಿಂದ ₹170, ಹುರಿಗಡಲೆ ₹150ರಿಂದ ₹180 ಹಾಗೂ ಕಡಲೆಬೀಜ ₹100ರಿಂದ ₹140ರ ವರೆಗೆ ಇದೆ.
ಸಕ್ಕರೆ ಕೆ.ಜಿ.ಗೆ ₹60ರಿಂದ ₹80, ಚಿರೋಟಿ ರವೆ ₹90ರಿಂದ ₹100, ಮೈದಾ ಹಿಟ್ಟು ₹45ರಿಂದ ₹50 ಹಾಗೂ ಕಡಲೆಕಾಳು ₹90ರಿಂದ ₹100ರ ವರೆಗೆ ಮಾರಾಟವಾಗುತ್ತಿದೆ.
ಅಡುಗೆ ಎಣ್ಣೆ ಲೀಟರ್‌ಗೆ ₹190ರಿಂದ ₹210ರ ವರೆಗೆ ಇದ್ದು, ದರವು ಆಯಾ ಬ್ರ್ಯಾಂಡ್‌ಗಳನ್ನು ಅವಲಂಬಿಸಿದೆ.
ಒಟ್ಟಾರೆ, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಮಾತ್ರ ಯಾವುದೇ ಕೊರತೆಯಾಗಿಲ್ಲ.



