Homecinemaಫ್ಲೈಟ್ ಜರ್ನಿ ನಡುವೆ ಆರೋಗ್ಯ ಸಮಸ್ಯೆ; ಬಿಗ್ ಬಾಸ್ ಮನೆಯಿಂದ ಓಂ ಪ್ರಕಾಶ್ ರಾವ್ ಔಟ್

ಫ್ಲೈಟ್ ಜರ್ನಿ ನಡುವೆ ಆರೋಗ್ಯ ಸಮಸ್ಯೆ; ಬಿಗ್ ಬಾಸ್ ಮನೆಯಿಂದ ಓಂ ಪ್ರಕಾಶ್ ರಾವ್ ಔಟ್

For Dai;y Updates Join Our whatsapp Group

ಬೆಂಗಳೂರು: ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಅವಕಾಶ ಸಿಕ್ಕಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.

ಸೆಪ್ಟೆಂಬರ್ 14ರ ಎಪಿಸೋಡ್‌ನಲ್ಲಿ ಮುಂಜಾನೆ ಕೆಲ ಸಮಯ ಮಾತ್ರ ಅವರು ಕಾಣಿಸಿಕೊಂಡಿದ್ದು, ಬಳಿಕ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿಲ್ಲ.

ಓಂ ಪ್ರಕಾಶ್ ರಾವ್ ಅವರಿಗೆ ವಯಸ್ಸಿನ ಕಾರಣದಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎನ್ನಲಾಗಿದೆ. ಇದರ ನಡುವೆಯೂ ಕಳೆದ ಒಂದು ವಾರದಿಂದ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ, ಈ ಬಾರಿಯ ಬಿಗ್ ಬಾಸ್ ಮನೆಯ ಫ್ಲೈಟ್ ಜರ್ನಿ ಅವರಿಗೆ ಹೆಚ್ಚು ಕಷ್ಟಕರವಾಗಿತ್ತು.

ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಕೆಲವರನ್ನು ಮನೆಯೊಳಗೆ ಹಾಗೂ ಇನ್ನು ಕೆಲವರನ್ನು ಗಾರ್ಡನ್ ಏರಿಯಾದಲ್ಲಿ ನಿರ್ಮಿಸಲಾಗಿದ್ದ ಫ್ಲೈಟ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಸ್ಪರ್ಧಿಗಳಿಗೆ ಒತ್ತಡದ ಪರಿಸ್ಥಿತಿ ಎದುರಾಗಿತ್ತು. ಈ ಪರಿಸ್ಥಿತಿಯನ್ನು ಎದುರಿಸಲು ಓಂ ಪ್ರಕಾಶ್ ರಾವ್ ಅವರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಈ ಹಿಂದೆ ಕೂಡ ಅನಾರೋಗ್ಯದ ಕಾರಣ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದು, ಚಿಕಿತ್ಸೆ ಪಡೆದು ಮತ್ತೆ ದೊಡ್ಮನೆಗೆ ಮರಳಿದ ಉದಾಹರಣೆಗಳಿವೆ. ಆದರೆ, ಓಂ ಪ್ರಕಾಶ್ ರಾವ್ ಅವರು ಸದ್ಯ ತಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತೆ ಬಿಗ್ ಬಾಸ್ ಮನೆಗೆ ಮರಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಬಾರಿ ದೊಡ್ಮನೆಯಲ್ಲಿ ಓಂ ಪ್ರಕಾಶ್ ರಾವ್ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಕಿರಿಯ ಸ್ಪರ್ಧಿಗಳಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಾ ಅವರು ಮನೆಯಲ್ಲಿದ್ದರು. ಇದೀಗ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ಸಹ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಬೇಸರ ಮೂಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img