ನವದೆಹಲಿ: ಬ್ಯಾಂಕ್ ನೌಕರರ ಬಹುದಿನಗಳ ಪ್ರಮುಖ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಇನ್ಮುಂದೆ ಪ್ರತೀ ಶನಿವಾರ ಬ್ಯಾಂಕ್‌ಗಳಿಗೆ ಅಧಿಕೃತ ರಜೆ (Bank Holiday) ಘೋಷಿಸಿ ಕೇಂದ್ರ ಆರ್ಥಿಕ ಇಲಾಖೆ (Ministry of Finance) ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.
ಎಲ್ಲಾ ಶನಿವಾರವೂ ಬ್ಯಾಂಕ್ ಬಂದ್: ಕೇಂದ್ರ ಆರ್ಥಿಕ ಇಲಾಖೆ ಹೊರಡಿಸಿರುವ ಆದೇಶದಂತೆ, ಈಗಿನಿಂದಲೇ ಜಾರಿಗೆ ಬರುವಂತೆ ತಿಂಗಳ ಎಲ್ಲಾ ಶನಿವಾರಗಳನ್ನು ಬ್ಯಾಂಕ್‌ಗಳಿಗೆ ರಜಾದಿನಗಳನ್ನಾಗಿ ನಿಗದಿಪಡಿಸಲಾಗಿದೆ. ಈ ಹಿಂದೆ ಬ್ಯಾಂಕ್‌ಗಳಿಗೆ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾತ್ರ ರಜೆ ಇತ್ತು. ಆದರೆ ಕೇಂದ್ರ ಸರ್ಕಾರದ ನೂತನ ನಿರ್ಧಾರದಿಂದಾಗಿ ಇನ್ಮುಂದೆ ವಾರದ 5 ದಿನಗಳು ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ರಜೆ ಸಿಗಲಿದೆ.
ಬ್ಯಾಂಕ್ ನೌಕರರ ಹೋರಾಟಕ್ಕೆ ಯಶಸ್ಸು: ಇತ್ತೀಚೆಗಷ್ಟೇ 5 ದಿನಗಳ ಕೆಲಸದ ವಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ಸಂಘಟನೆಗಳು 3 ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು. ಆ ಬಳಿಕ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಮತ್ತು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟ ಸಭೆ ನಡೆಸಿ ಚರ್ಚಿಸಿದ್ದವು. ಇದೀಗ ಬ್ಯಾಂಕ್ ನೌಕರರ ಒಕ್ಕೂಟವು ಸರ್ಕಾರದ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಪ್ರಮುಖವಾದ ‘ಎಲ್ಲಾ ಶನಿವಾರ ರಜೆ’ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ.

