HomeKarnataka NewsSIRನಲ್ಲಿ ದೊಡ್ಡ ಕುತಂತ್ರ ನಡೆಯುತ್ತಿದೆ; Form-7 ಮೂಲಕ ದಲಿತರು, ಅಲ್ಪಸಂಖ್ಯಾತರ ಮತ ತೆಗೆಯಲು ಯತ್ನ -...

SIRನಲ್ಲಿ ದೊಡ್ಡ ಕುತಂತ್ರ ನಡೆಯುತ್ತಿದೆ; Form-7 ಮೂಲಕ ದಲಿತರು, ಅಲ್ಪಸಂಖ್ಯಾತರ ಮತ ತೆಗೆಯಲು ಯತ್ನ – ಸಿಎಂ ಡಿಕೆಶಿ ಆರೋಪ

For Dai;y Updates Join Our whatsapp Group

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರವಾಗಿ ರಾಜ್ಯದ ಜನತೆಗೆ ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ ಮಹತ್ವದ ಸಂದೇಶ ನೀಡಿದ್ದು, ರಾಜ್ಯಾದ್ಯಂತ ದಲಿತರು, ಬಡವರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಪಟ್ಟಿಯಿಂದ ಕೈಬಿಡಲು ಬಿಜೆಪಿ ದೊಡ್ಡ ಮಟ್ಟದ ಕುತಂತ್ರ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 “ಎಸ್ಐಆರ್ ಪ್ರಕ್ರಿಯೆಯಿಂದ ದೇಶದಲ್ಲಿ ಬೃಹತ್ ಬದಲಾವಣೆಗಳಾಗುತ್ತಿವೆ. ಈಗಾಗಲೇ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿರುವುದನ್ನು ಗಮನಿಸಿದ್ದೀರಿ. ಪ್ರಸ್ತುತ 50 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಜನರ ಮತಗಳನ್ನು ಕಾಪಾಡಲು ಪ್ರಜಾಸೇವಕನಾಗಿ ಶ್ರಮಿಸುತ್ತಿದ್ದರೂ, ಇದರಲ್ಲಿ ವಿಫಲನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು” ಎಂದು ಡಿಕೆಶಿ ಕಳವಳ ವ್ಯಕ್ತಪಡಿಸಿದ್ದಾರೆ.

 ಅರ್ಜಿ ಹಾಗೂ ಆಕ್ಷೇಪಣೆ ಸಲ್ಲಿಸಲು ಇನ್ನು ಮೂರು ದಿನಗಳ ಕಾಲಾವಕಾಶವಿದ್ದು, ಬಿಜೆಪಿ ನಾಯಕರು ತಮ್ಮ ವರಿಷ್ಠರ ಸೂಚನೆ ಮೇರೆಗೆ ತಪ್ಪು ಮಾಹಿತಿ ನೀಡಿ ‘ಫಾರ್ಮ್-7’ (Form-7) ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಂಚು ರೂಪಿಸಿದ್ದಾರೆ. ಈ ಕುರಿತು ತಮ್ಮ ಪಕ್ಷದ ನಾಯಕರ ಬಳಿ ಸೂಕ್ತ ದಾಖಲೆಗಳಿದ್ದು, ಮತದಾನದ ಮೂಲಭೂತ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ಕ್ರಿಮಿನಲ್ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಚಿವ ಈಶ್ವರ್ ಖಂಡ್ರೆ ಅವರ ಭಾಲ್ಕಿ ಕ್ಷೇತ್ರ, ಶಾಸಕರಾದ ನಯನ ಮೋಟಮ್ಮ ಹಾಗೂ ತನ್ವೀರ್ ಸೇಠ್ ಅವರ ಕ್ಷೇತ್ರಗಳು ಸೇರಿದಂತೆ ಕಾಂಗ್ರೆಸ್ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲೂ ಫಾರ್ಮ್-7 ನೀಡಿ ಮತಗಳನ್ನು ತೆಗೆದುಹಾಕಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಖುದ್ದಾಗಿ ನಾಳೆ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡುವುದಾಗಿ ತಿಳಿಸಿರುವ ಅವರು, BLA-1, BLA-2 ಹಾಗೂ BLOಗಳಿಗೆ ಅರ್ಜಿ ನೀಡಲಾಗಿರುವ ಪ್ರತಿಯೊಂದು ಫಾರ್ಮ್-7 ಕುರಿತು 12 ಗಂಟೆಯೊಳಗೆ ನಿಖರ ಮಾಹಿತಿ ತಲುಪಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img