ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಮತ ಎಣಿಕೆಯ ಮೂರು ಸುತ್ತುಗಳು ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಸಂಕನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರಿಗಿಂತ 4,925 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ 6,459 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4,394 ಮತಗಳನ್ನು ಪಡೆದಿದ್ದರು. ಈ ಸುತ್ತಿನಲ್ಲಿ ಸಂಕನೂರ 2,065 ಮತಗಳ ಮುನ್ನಡೆ ಸಾಧಿಸಿದ್ದರು.
ಎರಡನೇ ಸುತ್ತಿನಲ್ಲಿ ಸಂಕನೂರ 6,154 ಮತಗಳನ್ನು ಪಡೆದರೆ, ಮೋಹನ್ ಲಿಂಬಿಕಾಯಿ 4,663 ಮತಗಳನ್ನು ಪಡೆದಿದ್ದರು. ಎರಡು ಸುತ್ತುಗಳ ಬಳಿಕ ಬಿಜೆಪಿ ಅಭ್ಯರ್ಥಿಯ ಮುನ್ನಡೆ 3,556 ಮತಗಳಿಗೆ ಏರಿಕೆಯಾಗಿತ್ತು.
ಮೂರನೇ ಸುತ್ತಿನಲ್ಲಿ ಎಣಿಕೆಯಾದ 14,000 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸಂಕನೂರ 6,191 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4,795 ಮತಗಳನ್ನು ಪಡೆದಿದ್ದಾರೆ.
ಮೂರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 42,001 ಮತಗಳಲ್ಲಿ ಸಂಕನೂರ 18,811 ಮತಗಳನ್ನು ಪಡೆದಿದ್ದರೆ, ಮೋಹನ್ ಲಿಂಬಿಕಾಯಿ 13,886 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸಂಕನೂರ 4,925 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.










