ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಇದೀಗ ನವೆಂಬರ್ 2ರಂದು ಮತ್ತೆ ಏರಿಕೆಯಾಗಿದೆ. ಸೋಮವಾರ 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆಯಲ್ಲಿ 490 ರೂಪಾಯಿ ಹೆಚ್ಚಳವಾಗಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂದು 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 49 ರೂಪಾಯಿ ಏರಿಕೆಯಾಗಿದ್ದು, 13,937 ರೂಪಾಯಿಗೆ ತಲುಪಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ 490 ರೂಪಾಯಿ ಹೆಚ್ಚಳದೊಂದಿಗೆ 1,39,370 ರೂಪಾಯಿಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಒಂದು ಗ್ರಾಂಗೆ 45 ರೂಪಾಯಿ ಹೆಚ್ಚಳವಾಗಿದ್ದು, ಇಂದಿನ ದರ 12,775 ರೂಪಾಯಿಯಾಗಿದೆ. 10 ಗ್ರಾಂ ಚಿನ್ನದ ಬೆಲೆ 450 ರೂಪಾಯಿ ಏರಿಕೆಯಾಗಿ 1,27,750 ರೂಪಾಯಿಗೆ ತಲುಪಿದೆ.
ಇನ್ನು 18 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 37 ರೂಪಾಯಿ ಹೆಚ್ಚಳವಾಗಿ 10,453 ರೂಪಾಯಿಯಾಗಿದೆ. 10 ಗ್ರಾಂಗೆ 370 ರೂಪಾಯಿ ಏರಿಕೆಯಾಗಿದ್ದು, ಇಂದಿನ ದರ 1,04,530 ರೂಪಾಯಿಯಾಗಿದೆ.
ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಇಲ್ಲ
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ. ನವೆಂಬರ್ 2ರಂದು ಒಂದು ಗ್ರಾಂ ಬೆಳ್ಳಿ ಬೆಲೆ 200 ರೂಪಾಯಿ ಇದ್ದು, ಪ್ರತಿ ಕೆ.ಜಿ ಬೆಳ್ಳಿಯ ದರ 2 ಲಕ್ಷ ರೂಪಾಯಿಯಾಗಿದೆ.
ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದ್ದು, ಇಂದಿನ ಚಿನ್ನದ ಬೆಲೆ ಏರಿಕೆ ಆಭರಣ ಖರೀದಿದಾರರ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಬೆಲೆ ಯಾವ ರೀತಿಯ ಬದಲಾವಣೆ ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.









