ಬಟ್ಟೆಗಳ ಗುಣಮಟ್ಟ ಹಾಳಾಗಬಾರದು ಎಂಬ ಕಾರಣಕ್ಕೆ ಕೆಲವರು ವಾಷಿಂಗ್ ಮಷೀನ್ ಬದಲು ಕೈಯಲ್ಲೇ ಬಟ್ಟೆಗಳನ್ನು ಒಗೆಯಲು ಇಷ್ಟಪಡುತ್ತಾರೆ.

ಸಾಮಾನ್ಯವಾಗಿ ಬಟ್ಟೆಗಳನ್ನು ಒಗೆಯುವ ಮೊದಲು ಡಿಟರ್ಜೆಂಟ್ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿಡುತ್ತಾರೆ. ಇದರಿಂದ ಬಟ್ಟೆಗಳಲ್ಲಿರುವ ಕೊಳಕು, ಕಲೆಗಳು ಮತ್ತು ಬೆವರಿನ ವಾಸನೆಯನ್ನು ಸುಲಭವಾಗಿ ನಿವಾರಿಸಬಹುದು.
ಆದರೆ ಬಟ್ಟೆಗಳನ್ನು ಡಿಟರ್ಜೆಂಟ್ ನೀರಿನಲ್ಲಿ ಎಷ್ಟು ಹೊತ್ತು ನೆನೆಸಿಡಬೇಕು ಎಂಬುದು ಬಹಳ ಮುಖ್ಯ. ಸಾಮಾನ್ಯವಾಗಿ 15ರಿಂದ 30 ನಿಮಿಷಗಳ ಕಾಲ ನೆನೆಸಿಟ್ಟರೆ ಸಾಕು. ಹತ್ತಿ ಬಟ್ಟೆಗಳನ್ನು 15ರಿಂದ 30 ನಿಮಿಷಗಳ ಕಾಲ ನೆನೆಸಬಹುದು. ಜೀನ್ಸ್ ಹಾಗೂ ದಪ್ಪ ಬಟ್ಟೆಗಳು ಹೆಚ್ಚು ಕೊಳಕಾಗಿದ್ದರೆ 20ರಿಂದ 30 ನಿಮಿಷಗಳ ಕಾಲ ನೆನೆಸಿಡಬಹುದು.
ಇನ್ನು ಗಾಢ ಬಣ್ಣದ ಬಟ್ಟೆಗಳನ್ನು ಹೆಚ್ಚು ಹೊತ್ತು ನೆನೆಸಿಡಬಾರದು. ಅವುಗಳ ಬಣ್ಣ ಮಸುಕಾಗುವ ಸಾಧ್ಯತೆ ಇರುವುದರಿಂದ ಬಿಳಿ ಬಟ್ಟೆಗಳಿಂದ ಪ್ರತ್ಯೇಕವಾಗಿ ಇಡಬೇಕು.
ಹೆಚ್ಚು ಹೊತ್ತು ನೆನೆಸಿದರೆ ಏನಾಗುತ್ತದೆ?
ಕೆಲವರು ಬಟ್ಟೆಗಳನ್ನು ಗಂಟೆಗಟ್ಟಲೆ ಅಥವಾ ರಾತ್ರಿಯಿಡೀ ಡಿಟರ್ಜೆಂಟ್ ನೀರಿನಲ್ಲಿ ನೆನೆಸಿಡುತ್ತಾರೆ. ಆದರೆ ಇದು ಬಟ್ಟೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲ ಡಿಟರ್ಜೆಂಟ್ ನೀರಿನಲ್ಲಿ ಇರುವುದರಿಂದ ಬಣ್ಣ ಮಸುಕಾಗುವ ಸಾಧ್ಯತೆ ಇದೆ. ವಿಶೇಷವಾಗಿ ಗಾಢ ಬಣ್ಣದ ಮತ್ತು ಪ್ರಿಂಟೆಡ್ ಬಟ್ಟೆಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಸೂಕ್ಷ್ಮ ಬಟ್ಟೆಗಳ ನಾರುಗಳ ಮೇಲೂ ಪರಿಣಾಮ ಬೀರಬಹುದು.
ಬಟ್ಟೆ ಒಗೆಯುವಾಗ ಈ ಎಚ್ಚರಿಕೆ ಇರಲಿ:
-
ಬಿಳಿ, ಬಣ್ಣದ ಮತ್ತು ಗಾಢ ಬಣ್ಣದ ಬಟ್ಟೆಗಳನ್ನು ಪ್ರತ್ಯೇಕವಾಗಿ ನೆನೆಸಿಡಿ.
-
ಅಗತ್ಯಕ್ಕಿಂತ ಹೆಚ್ಚು ಡಿಟರ್ಜೆಂಟ್ ಬಳಸಬೇಡಿ.
-
ಚಹಾ, ಎಣ್ಣೆ ಮತ್ತು ತರಕಾರಿ ಕಲೆಗಳನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ.
-
ಬಟ್ಟೆ ಒಗೆದ ಬಳಿಕ ಡಿಟರ್ಜೆಂಟ್ ಉಳಿಯದಂತೆ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
-
ಬಟ್ಟೆಯ ಆರೈಕೆ ಸೂಚನೆಗಳನ್ನು ಗಮನಿಸಿ ನೀರಿನ ತಾಪಮಾನ ಆಯ್ಕೆಮಾಡಿ.
-
ಬಣ್ಣದ ಬಟ್ಟೆಗಳನ್ನು ಹೆಚ್ಚು ಹೊತ್ತು ಬಿಸಿಲಿನಲ್ಲಿ ಒಣಗಿಸುವುದನ್ನು ತಪ್ಪಿಸಿ.
ಹೀಗಾಗಿ ಬಟ್ಟೆಗಳನ್ನು ಒಗೆಯುವ ಮೊದಲು ಸರಿಯಾದ ಸಮಯದವರೆಗೆ ಮಾತ್ರ ಡಿಟರ್ಜೆಂಟ್ ನೀರಿನಲ್ಲಿ ನೆನೆಸಿಡುವುದು ಅವುಗಳ ಬಣ್ಣ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.










