ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ನವೆಂಬರ್ 19ರ ಗುರುವಾರ ಮತ್ತು ನವೆಂಬರ್ 20ರ ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಬೆಸ್ಕಾಂ ಮಾಹಿತಿ ನೀಡಿದ್ದು, ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.
ಕೆ.ವಿ. ಎಲ್.ಆರ್. ಬಂಡೆ ಉಪಕೇಂದ್ರ ವ್ಯಾಪ್ತಿಯಲ್ಲಿ ನವೆಂಬರ್ 19ರಂದು ಹಾಗೂ ಕೆ.ವಿ. ರಾಜನಕುಂಟೆ ಮತ್ತು ಕೆ.ವಿ. ಎಂ.ಇ.ಐ. ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನವೆಂಬರ್ 20ರಂದು ಕಾಮಗಾರಿ ನಡೆಯಲಿದೆ.
ಗುರುವಾರ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ
ನವೆಂಬರ್ 19ರಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎ.ಕೆ. ಆಶ್ರಮ ರಸ್ತೆ, ದೇವೇಗೌಡ ರಸ್ತೆ, ಆರ್.ಟಿ. ನಗರ 1ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಸೈನಿಕ ಪ್ರದೇಶ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯು.ಎಸ್.ಎಸ್.ಬಿ ಮಲಿನಜಲ ಶುದ್ಧೀಕರಣ ಘಟಕ, ಮರಿಯಣ್ಣಪಾಳ್ಯ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್, ಭುವನೇಶ್ವರಿ ನಗರ, ಬಿಇಎಲ್ ಕಾರ್ಪೊರೇಟ್ ಕಚೇರಿ, ಚಾಣಕ್ಯ ಲೇಔಟ್, ನಾಗವಾರ, ಎಂ.ಎಸ್. ರಾಮಯ್ಯ ನಾರ್ತ್ ಸಿಟಿ,
ತನಿಸಂದ್ರ ಮುಖ್ಯ ರಸ್ತೆ, ಆಶೀರ್ವಾದ್ ನಗರ, ಅಮರಜ್ಯೋತಿ ಲೇಔಟ್, ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್ಕ್ಲೇವ್, ಶ್ರೀರಾಮಪುರ ಗ್ರಾಮ, ವಿ.ಎಚ್.ಬಿ.ಸಿ.ಎಸ್ ಲೇಔಟ್, ಜೋಜಪ್ಪ ಲೇಔಟ್, 17ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ರಾಜನಕುಂಟೆ ಮತ್ತು ಸುತ್ತಮುತ್ತ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ
ನವೆಂಬರ್ 19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ಡೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ, ಸೆಂಚುರಿ ಲೇಔಟ್, ಎಜಿಬಿಜಿ ಲೇಔಟ್, ಬೈರವೇಶ್ವರ ಹೋಟೆಲ್, ಶೆಟ್ಟಿಹಳ್ಳಿ ಗ್ರಾಮ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಜುಂಜಪ್ಪ ಸರ್ಕಲ್,
ಲೇಕ್ ವ್ಯೂ, ಕಾವೇರಿ ಲೇಔಟ್, ಬೋನ್ವಿಲ್ ಏರಿಯಾ, ಚಿಕ್ಕಸಂದ್ರ, ಐರ್ಲೇಔಟ್, ಸಪ್ತಗಿರಿ ಕಾಲೇಜು, ಜಗದೀಶ್ ಲೇಔಟ್, ನಾಗದೇವ್ ಲೇಔಟ್, 8ನೇ ಮೈಲಿ, ತುಮಕೂರು ಮುಖ್ಯ ರಸ್ತೆ, ಗಣೇಶ ಸಾ ಮಿಲ್, ಮಹೇಶ್ವರಿ ನಗರ, ಈಗಲ್ ಬೇಕರಿ, ಕೆಂಪೇಗೌಡ ನಗರ, ಕೆಕೆ ರಸ್ತೆ, ಟಿ. ದಾಸರಹಳ್ಳಿ ಮೆಟ್ರೋ ಹಿಂಭಾಗ, ಹಳೆಯ ಮಸೀದಿ, ಹೊಸ ಮಸೀದಿ, ಪೈಪ್ಲೈನ್ ರಸ್ತೆ, ಬೃಂದಾವನ ಲೇಔಟ್, ಮರಿಗ್ಮ್ ಅಪಾರ್ಟ್ಮೆಂಟ್ ನಗರ,
ಕಲ್ಯಾಣನಗರ ಬಾಗಲಗುಂಟೆ, ಕಿರ್ಲೋಸ್ಕರ್ ಲೇಔಟ್, ಎನ್ಎಂಎಚ್ ಲೇಔಟ್, ಸೌಂದರ್ಯ ಲೇಔಟ್, ಮೀನಾಕ್ಷಿ ಲೇಔಟ್, ಸಿದ್ದೇಶ್ವರ ಲೇಔಟ್, ಸಹ್ಯಾದ್ರಿ ಬಳಗ, ಸಪ್ತಗಿರಿ ವೈದ್ಯಕೀಯ ಕಾಲೇಜು, ಹೆಸರಘಟ್ಟ ಮುಖ್ಯ ರಸ್ತೆ, ಚಿಕ್ಕಬಾಣಾವರ, ಸೋಮಶೆಟ್ಟಿಹಳ್ಳಿ, ಕೆರೆಗುಡ್ಡದಹಳ್ಳಿ, ಮೇದರಹಳ್ಳಿ, ಗುಣಿಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಶುಕ್ರವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತ
ನವೆಂಬರ್ 20ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಲ್ಲೇಶ್ವರ, ಎಂ.ಡಿ. ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್ಇಎಲ್, ಐಐಎಸ್ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತಪುರ ಪೈಪ್ಲೈನ್ ರಸ್ತೆ, ಎಲ್ಎನ್ ಕಾಲೋನಿ,
ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯ ರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಬೆಸ್ಕಾಂ ಸೂಚಿಸಿದೆ.







