• About
  • Advertise
  • Privacy & Policy
  • Contact
Saturday, November 21, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Bengaluru News

ಮಗನನ್ನು ಕೊಂದು ಪತ್ನಿ ಮೇಲೆ ಹಲ್ಲೆ; ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಮಲತಂದೆ ಅರೆಸ್ಟ್!

Vijaya Sakshi News Desk by Vijaya Sakshi News Desk
November 20, 2026
in Bengaluru News
ಹಣಕ್ಕಾಗಿ ‘ಅಪಘಾತ’ದ ಸ್ಕೆಚ್: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಮೇಲೆ ಬೈಕ್ ಹರಿಸಿ ಕೊಲೆ, ರಕ್ಷಕರಂತೆ ನಟಿಸಿದ ಗ್ಯಾಂಗ್ ಅರೆಸ್ಟ್
0
SHARES
2
VIEWS
Share on Facebook

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಲತಂದೆಯೊಬ್ಬ 18 ವರ್ಷದ ಮಗನನ್ನು ಹತ್ಯೆಗೈದಿರುವ ಘಟನೆ ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುದೀಪ್ ಎಂಬಾತ ತನ್ನ ಮಲಮಗ ಸೋಹಮ್ ದಾಸ್‌ನನ್ನು ಕೊಂದು, ಪತ್ನಿ ಸೀಮಾ ದಾಸ್ ಮೇಲೆಯೂ ಹಲ್ಲೆ ನಡೆಸಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಘಟನೆ ನಡೆದು ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನವೆಂಬರ್ 16ರ ರಾತ್ರಿ ಮನೆಯಲ್ಲಿ ದಂಪತಿ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಈ ವೇಳೆ ಸುದೀಪ್ ಮಗ ಸೋಹಮ್‌ನನ್ನು ಹತ್ಯೆಗೈದು, ಪತ್ನಿ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ, ಮನೆಯಲ್ಲಿ ನಡೆದಿದ್ದ ಘಟನೆ ಮೂರು ದಿನಗಳವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ.

ಮೂರು ದಿನಗಳ ಕಾಲ ಮನೆಯಲ್ಲೇ ನರಳಾಡಿದ ತಾಯಿ:

ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಈ ಹಿಂದೆ ಅಪಾರ್ಟ್‌ಮೆಂಟ್ ಮಾಲೀಕರಿಗೆ ದೂರು ನೀಡಿದ್ದರು. ಮನೆ ಮಾಲೀಕರು ಕೂಡ ದಂಪತಿಗೆ ಜಗಳ ಮಾಡದಂತೆ ಎಚ್ಚರಿಕೆ ನೀಡಿದ್ದರು. ನವೆಂಬರ್ 16ರ ರಾತ್ರಿ ಮತ್ತೆ ಜೋರಾಗಿ ಗಲಾಟೆ ಕೇಳಿಬಂದಿದ್ದರೂ, ಸ್ವಲ್ಪ ಸಮಯದ ಬಳಿಕ ಶಾಂತವಾಗಿದ್ದರಿಂದ ನೆರೆಹೊರೆಯವರು ಅದನ್ನು ಸಾಮಾನ್ಯ ಜಗಳವೆಂದು ಭಾವಿಸಿದ್ದರು.

ಆದರೆ, ಮೂರು ದಿನಗಳಾದರೂ ಸೀಮಾ ದಾಸ್ ಹಾಗೂ ಸೋಹಮ್ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಮನೆಗೆ ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೀಗ ತೆರೆಸಿದಾಗ ಬಯಲಾಯ್ತು ಭೀಕರ ಘಟನೆ:

ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಸಹಾಯದಿಂದ ಮನೆಯ ಬೀಗ ತೆರೆಸಿದ್ದಾರೆ. ಈ ವೇಳೆ ಮನೆಯೊಳಗಿನ ಕೊಠಡಿಯಿಂದ ಸೀಮಾ ದಾಸ್ ಕೂಗುತ್ತಿರುವ ಶಬ್ದ ಕೇಳಿಬಂದಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಮೂರು ದಿನಗಳಿಂದ ಅನ್ನ, ನೀರಿಲ್ಲದೆ ಮನೆಯೊಳಗೆ ಸಿಲುಕಿದ್ದ ಸೀಮಾ ತೀವ್ರವಾಗಿ ಬಳಲಿದ್ದರು ಎನ್ನಲಾಗಿದೆ.

ಮನೆಯ ಹಾಲ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಬಾತ್‌ರೂಮ್‌ನಲ್ಲಿ ಸೋಹಮ್ ದಾಸ್‌ನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ಆರೋಪಿ ಸುದೀಪ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.

Tags: Banashankari Police StationBengaluru Murder CasekannadanewsKarnatakastepfatherSudeepVijayasakshivijayasakshinews
ShareSendShare
Previous Post

ಬಿಗ್‌ಬಾಸ್ ಮನೆಯಲ್ಲಿ ಮಹಾ ಟ್ವಿಸ್ಟ್; ಮಹಾರಾಣಿ ಗಾನವಿ ಸೇರಿ ಮೂವರು ಜೈಲುಪಾಲು!

Next Post

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಕೃಪಾ ಆಳ್ವಾಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಕೃಪಾ ಆಳ್ವಾಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಕೃಪಾ ಆಳ್ವಾಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪಿ ಗಿರೀಶ್ ದೋಷಿ! ನವೆಂಬರ್ 25ಕ್ಕೆ ಶಿಕ್ಷೆ ಪ್ರಕಟಿಸಲಿರುವ ಹುಬ್ಬಳ್ಳಿ ನ್ಯಾಯಾಲಯ

ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪಿ ಗಿರೀಶ್ ದೋಷಿ! ನವೆಂಬರ್ 25ಕ್ಕೆ ಶಿಕ್ಷೆ ಪ್ರಕಟಿಸಲಿರುವ ಹುಬ್ಬಳ್ಳಿ ನ್ಯಾಯಾಲಯ

November 21, 2026
‘ಬಸವ ಮಂಟಪ’ ಕೃತಿ ನಿಷೇಧಿಸಬೇಕು, ಲೇಖಕನ ವಿರುದ್ಧ ಕ್ರಮ ಕೈಗೊಳ್ಳಿ: ಸಾಣೇಹಳ್ಳಿ ಶ್ರೀಗಳ ಆಗ್ರಹ

‘ಬಸವ ಮಂಟಪ’ ಕೃತಿ ನಿಷೇಧಿಸಬೇಕು, ಲೇಖಕನ ವಿರುದ್ಧ ಕ್ರಮ ಕೈಗೊಳ್ಳಿ: ಸಾಣೇಹಳ್ಳಿ ಶ್ರೀಗಳ ಆಗ್ರಹ

November 21, 2026

ಸಚಿವ ಖಂಡ್ರೆ–ಶಾಸಕ ಲಮಾಣಿ ನಡುವೆ ಜಟಾಪಟಿ

November 21, 2026
KPSC ಅಕ್ರಮ ಪ್ರಕರಣ: ಸದಸ್ಯೆ ಬಿ.ವಿ. ಗೀತಾ ಮನೆ ಮೇಲೆ SIT ದಾಳಿ, ದಾಖಲೆಗಳ ಪರಿಶೀಲನೆ

KPSC ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಬಿ.ವಿ. ಗೀತಾಗೆ ನ್ಯಾಯಾಂಗ ಬಂಧನ

November 21, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪಿ ಗಿರೀಶ್ ದೋಷಿ! ನವೆಂಬರ್ 25ಕ್ಕೆ ಶಿಕ್ಷೆ ಪ್ರಕಟಿಸಲಿರುವ ಹುಬ್ಬಳ್ಳಿ ನ್ಯಾಯಾಲಯ

ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪಿ ಗಿರೀಶ್ ದೋಷಿ! ನವೆಂಬರ್ 25ಕ್ಕೆ ಶಿಕ್ಷೆ ಪ್ರಕಟಿಸಲಿರುವ ಹುಬ್ಬಳ್ಳಿ ನ್ಯಾಯಾಲಯ

November 21, 2026
‘ಬಸವ ಮಂಟಪ’ ಕೃತಿ ನಿಷೇಧಿಸಬೇಕು, ಲೇಖಕನ ವಿರುದ್ಧ ಕ್ರಮ ಕೈಗೊಳ್ಳಿ: ಸಾಣೇಹಳ್ಳಿ ಶ್ರೀಗಳ ಆಗ್ರಹ

‘ಬಸವ ಮಂಟಪ’ ಕೃತಿ ನಿಷೇಧಿಸಬೇಕು, ಲೇಖಕನ ವಿರುದ್ಧ ಕ್ರಮ ಕೈಗೊಳ್ಳಿ: ಸಾಣೇಹಳ್ಳಿ ಶ್ರೀಗಳ ಆಗ್ರಹ

November 21, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper