• About
  • Advertise
  • Privacy & Policy
  • Contact
Friday, November 27, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Crime News

ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

Vijaya Sakshi News Desk by Vijaya Sakshi News Desk
November 27, 2026
in Crime News, India News
ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್
0
SHARES
0
VIEWS
Share on Facebook

ಜಾರ್ಖಂಡ್: ಇಬ್ಬರು ಸಹೋದರರು ತಮ್ಮ ಪತ್ನಿಯರನ್ನೇ ಹತ್ಯೆ ಮಾಡಿ, ಮೃತದೇಹಗಳನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಿ ಪಕ್ಕದ ಜಿಲ್ಲೆಯ ಕಾಡಿನಲ್ಲಿ ಹೂತು ಹಾಕಿರುವ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರ ನಡುವಿನ ದೀರ್ಘಕಾಲದ ಮನಸ್ತಾಪವೇ ಹತ್ಯೆಗೆ ಕಾರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆಂಬ್ಯುಲೆನ್ಸ್‌ನಲ್ಲಿ ಶವ ಸಾಗಿಸಿ ಕಾಡಿನಲ್ಲಿ ಹೂತು ಹಾಕಿದರು

ಆರೋಪಿಗಳನ್ನು ಶಿವಶಂಕರ್ ಸಾಹು ಮತ್ತು ಅವರ ಸಹೋದರ ನವೀನ್ ಸಾಹು ಎಂದು ಗುರುತಿಸಲಾಗಿದೆ. ಶಿವಶಂಕರ್ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರೂ ತಮ್ಮ ಪತ್ನಿಯರಾದ ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಅವರನ್ನು ಸೋಮವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಮೃತದೇಹಗಳನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಿ ನೆರೆಯ ಸಿಮ್ಡೆಗಾ ಜಿಲ್ಲೆಯ ಕಾಡಿನಲ್ಲಿ ಹೂತು ಹಾಕಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಇಬ್ಬರು ಮಹಿಳೆಯರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪತ್ನಿಯರ ನಡುವಿನ ಮನಸ್ತಾಪವೇ ಹತ್ಯೆಗೆ ಕಾರಣವೇ?

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ಮಹಿಳೆಯರ ನಡುವೆ ಬಹಳ ದಿನಗಳಿಂದ ಮನಸ್ತಾಪ ಮತ್ತು ವಿವಾದವಿತ್ತು. ಈ ವಿಚಾರದಿಂದ ಸಹೋದರರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಆದರೆ, ಹತ್ಯೆ ನಡೆದ ಎರಡು ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರು ಪರಸ್ಪರ ರಾಜಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಮಹಿಳೆಯರ ಕುಟುಂಬದವರು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆಗ ಎಲ್ಲವೂ ಸಹಜವಾಗಿಯೇ ಇತ್ತು ಎಂದು ಗುಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಸ್ ಬಿನ್ ಜಮಾ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಬಯಲಾದ ಹತ್ಯೆ ಪ್ರಕರಣ

ಮಹಿಳೆಯರು ಕಾಣೆಯಾಗಿರುವ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದಾಗ, ಸಹೋದರರು ತಮ್ಮ ಪತ್ನಿಯರು ಯಾರಿಗೂ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಾರೆ ಎಂದು ಹೇಳಿದ್ದರು. ಆದರೆ, ನಿರಂತರ ವಿಚಾರಣೆಯ ಬಳಿಕ ಇಬ್ಬರೂ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಬಳಸಲಾಗಿದೆ ಎನ್ನಲಾದ ಕೊಡಲಿ ಹಾಗೂ ಮೃತದೇಹಗಳನ್ನು ಸಾಗಿಸಲು ಬಳಸಿದ ಆಂಬ್ಯುಲೆನ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಸಾಹು, ನವೀನ್ ಸಾಹು ಜೊತೆಗೆ ಅವರ ತಂದೆ ಸಮೇಶ್ವರ ಸಾಹು ಮತ್ತು ತಾಯಿ ತಿಲೇಶ್ವರಿ ದೇವಿಯನ್ನೂ ಬಂಧಿಸಲಾಗಿದೆ. ಪ್ರಕರಣದ ನಿಖರ ಕಾರಣ ಹಾಗೂ ಹತ್ಯೆಯಲ್ಲಿ ಇತರ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Tags: BreakingNewsGumla Crime NewsJharkhand Double MurderKarnatakaNewsHeadlinesTwo Brothers Murder WivesVijayasakshivijayasakshinewswife murder case
ShareSendShare
Previous Post

10 ಎಕರೆ ಆಸ್ತಿ ವಿವಾದಕ್ಕೆ ಡಬಲ್ ಮರ್ಡರ್; ಅತ್ತೆ ಹಾಗೂ ಅಳಿಯನ ಬರ್ಬರ ಹತ್ಯೆ

Next Post

ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬೌಲರ್ʼಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ; ಶ್ರೀಲಂಕಾ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ತಿಲಕ್ ವರ್ಮಾ

ಬೌಲರ್ʼಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ; ಶ್ರೀಲಂಕಾ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ತಿಲಕ್ ವರ್ಮಾ

November 27, 2026
ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

November 27, 2026
ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

November 27, 2026
ಹಣಕ್ಕಾಗಿ ‘ಅಪಘಾತ’ದ ಸ್ಕೆಚ್: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಮೇಲೆ ಬೈಕ್ ಹರಿಸಿ ಕೊಲೆ, ರಕ್ಷಕರಂತೆ ನಟಿಸಿದ ಗ್ಯಾಂಗ್ ಅರೆಸ್ಟ್

10 ಎಕರೆ ಆಸ್ತಿ ವಿವಾದಕ್ಕೆ ಡಬಲ್ ಮರ್ಡರ್; ಅತ್ತೆ ಹಾಗೂ ಅಳಿಯನ ಬರ್ಬರ ಹತ್ಯೆ

November 27, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬೌಲರ್ʼಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ; ಶ್ರೀಲಂಕಾ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ತಿಲಕ್ ವರ್ಮಾ

ಬೌಲರ್ʼಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ; ಶ್ರೀಲಂಕಾ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ತಿಲಕ್ ವರ್ಮಾ

November 27, 2026
ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

ಪೆಟ್ರೋಲ್ ಬಂಕ್ʼನಲ್ಲಿ ಶೇ.30ರಷ್ಟು ಪಾಲುದಾರಿಕೆ ಆಮಿಷ; ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ!

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper