ನವಲಗುಂದ: ನವಲಗುಂದ ಪಟ್ಟಣದ ಜಂಗಮ ಸಮಾಜದ ಹಿರಿಯ ಜೀವಿ ಶತಾಯುಷಿ ಲಿಂ. ಶ್ರೀಮತಿ ಈರವ್ವ ಕೋಂ ಡಾ. ಬಸಯ್ಯ ಹಿರೇಮಠ ಇವರು ದಿನಾಂಕ 9/03/2023 ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಕಾರಣ ಇಂದು ಶನಿವಾರ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಮೃತರಾದ ಈರವ್ವ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶತಾಯುಷಿಯನ್ನು ಕಳೆದುಕೊಂಡು ತೀವ್ರ ದುಃಖಿತರಾಗಿದ್ದ ಮೃತರ ಪುತ್ರರಲ್ಲಿ ಒಬ್ಬರಾದ ಪತ್ರಕರ್ತ ಚರಂತಯ್ಯ ಹಿರೇಮಠ ಅವರನ್ನು ಸಮಾಧಾನ ಪಡಿಸಿ ಭಗವಂತ ತಮ್ಮ ತಾಯಿಯವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಹಿರಿಯ ಪುತ್ರರಾದ ಡಾ. ಶೇಖರಯ್ಯ ಹಿರೇಮಠ, ಹಿರಿಯ ಪುತ್ರಿ ನಿವೃತ್ತ ಪ್ರಾಚಾರ್ಯರಾದ ಸರೋಜ ಹಿರೇಮಠ, ಓಣಿಯ ಮುಖಂಡರಾದ ಸಿದ್ಧಲಿಂಗಯ್ಯ ಸುಬೇದಾರಮಠ, ಶಿವು ಗರಗದಮಠ, ಈರಯ್ಯ ಗರಗದಮಠ, ಬಸು ಕೇರಿಮಠ, ರಾಜು ಭಾಂಡಗೆ, ತಾಲೂಕ ಬಿಜೆಪಿ ಅಧ್ಯಕ್ಷ ಎಸ್ ಬಿ ದಾನಪ್ಪಗೌಡರ, ಮುಖಂಡರಾದ ಶರಣಪ್ಪ ಹಕ್ಕರಕಿ, ನಾಗೇಶ ಬೆಂಡಿಗೇರಿ, ಬಸವರಾಜ ಕಾತರಕಿ ಇತರರು ಉಪಸ್ಥಿತರಿದ್ದರು.
