ಗದಗ: ಬಣ ರಾಜಕೀಯ, ಗುಂಪುರಾಜಕೀಯ, ಭಿನ್ನಾಭಿಪ್ರಾಯ ಯಾವುದೂ ಇಲ್ಲ, ಇವೆಲ್ಲ ಮಾಧ್ಯಮದ ಸೃಷ್ಟಿ.. ಮಾಧ್ಯಮದಲ್ಲಿ ಸುದ್ದಿ ಬಾರದ ಹಾಗೆ ಒಗ್ಗಟ್ಟು ತೋರಿಸಬೇಕು, ಒಗ್ಗಟ್ಟು ಪ್ರದರ್ಶಿಸಿಬೇಕು ಅನ್ನೋದು ಹೈಕಮಾಂಡ್ ನ ವಿಶೇಷ ಅಪೇಕ್ಷೆ, ಆಸೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೆವಾಲಾ, ವೇಣುಗೋಪಾಲ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಶಿಸ್ತಿನಿಂದ ನಡೆಯುತ್ತದೆ ಎಂದರು.
ಯಾರೆ ಆಗಲಿ, ಇವೆಲ್ಲ ಪಕ್ಷದ ವಿಚಾರ. ಮಾಧ್ಯಮದಲ್ಲಿ ಚರ್ಚಿಸುವ ವಿಚಾರ ಅಲ್ಲ, ಹೈಕಮಾಂಡ್ ನಿರ್ಣಯ ಮಾಡುವ ವಿಷಯಗಳನ್ನ ಹೈಕಮಾಂಡ್‌ಗೆ ಬಿಡಬೇಕು. ನಾವು ಮಾಧ್ಯಮದ ಜೊತೆ ಚರ್ಚೆ ಮಾಡವುದಲ್ಲ ಎಂದರು.
ಇನ್ನೂ ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತು ತಪ್ಪಬಾರದು.. ಶಿಸ್ತು ತಪ್ಪಿದರೆ ಜನರ ಬಗೆಗಿನ ಕಾಳಜಿ, ರಾಜ್ಯದ ಅಭಿವೃದ್ಧಿ ಕುಂಠಿತವಾದೀತು.. ಆ ಎಚ್ಚರಿಕೆಯಿಂದ ನಮ್ಮ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಸಚಿವ, ಶಾಸಕರಿಗೆ ಎಚ್ ಕೆ ಪಾಟೀಲ್ ಸಲಹೆ ನೀಡಿದರು.