ಗದಗ: ಕರ್ನಾಟಕ ನಾಮಕರಣಗೊಂಡ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮಕ್ಕೆ ಅದ್ಧೂರಿ ಸಿಧ್ಧತೆ ಮಾಡಿಕೊಳ್ಳಲಾಗಿದೆ.
ಗದಗ ನಗರದಾದ್ಯಂತ ಎಲ್ಲೆಲ್ಲೂ ಕನ್ನಡದ ಕಂಪು, ರಸ್ತೆಯ ಪಕ್ಕ ಕನ್ನಡ ಬಾವುಟ, ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತದೆ.
ಗದಗ ವೀರನಾರಾಯಣ ದೇವಸ್ಥಾನದಲ್ಲಿ ಕನ್ನಡ ಜ್ಯೋತಿ ಸ್ವಾಗತಕ್ಕೆ ತಯಾರಿ ಮಾಡಲಾಗಿದ್ದು, ಕರ್ನಾಟಕ ಸಂಭ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ ಆಗಮನಕ್ಕಾಗಿ ಕನ್ನಡಾಭಿಮಾನಿಗಳು ಕಾಯ್ದು ಕುಳಿತಿದ್ದಾರೆ. ನಂತರ ಭುವನೇಶ್ವರ ದೇವಿ ಮೂರ್ತಿಯೊಂದಿಗೆ ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ಸ್ ಸೊಸೈಟಿ ವರೆಗೆ ಮೆರವಣಿಗೆ ನಡೆಸಲಾಗುತ್ತದೆ.



