Homecultureಶ್ರೀ ಮೃತ್ಯುಂಜಯ ಅಪ್ಪನವರ ಸ್ಮರಣೋತ್ಸವ

ಶ್ರೀ ಮೃತ್ಯುಂಜಯ ಅಪ್ಪನವರ ಸ್ಮರಣೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮಣಕವಾಡದ ಮಹಿಮಾಪುರುಷ ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ-೧೨೫ ಕಾರ್ಯಕ್ರಮ ಫೆ.೨೫ರ ಮುಂಜಾನೆ ೧೧ ಗಂಟೆಗೆ ನಗರದ ಲಖಾನಿ ಆಸ್ಪತ್ರೆ ಎದುರಿಗಿನ ಶ್ರೀ ಗುರುಮೃತ್ಯುಂಜಯ ಗುರುಕುಲ ಆಶ್ರಮದ ಸಭಾಭವನದಲ್ಲಿ ಜರುಗಲಿದೆ. ಹಿರಿಯ ಸಾಹಿತಿಗಳಾದ ಐ.ಕೆ. ಕಮ್ಮಾರ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಹಿರಿಯ ಸಾಹಿತಿಗಳಾದ ಬಸವರಾಜ ಗಣಪ್ಪನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಕ್ತಿ ಸೇವೆಯನ್ನು ಎಚ್.ಎನ್. ಕುರಿ ವಹಿಸುವರು. ಈ ಕಾರ್ಯಕ್ರಮದಲ್ಲಿ ಶಿವಶಂಕ್ರಪ್ಪ ಆರಟ್ಟಿ, ಡಿ.ಜಿ. ಪಾಟೀಲ, ಶಿವಣ್ಣ ಒಡೆಯರ, ಕೆ.ಬಿ. ಮರಡ್ಡಿ ಗುರುಗಳು, ಮೃತ್ಯುಂಜಯ ಹಟ್ಟಿ ಮುಂತಾದವರು ಪಾಲ್ಗೊಳ್ಳುವರು. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪೂಜ್ಯ ಮೃತ್ಯುಂಜಯ ಅಪ್ಪನ ಕೃಪೆಗೆ ಪಾತ್ರರಾಗಲು ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಂ, ಅಕ್ರಮ್, ಸ್ನೇಹಾ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img