ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಂ.ಅಗಡಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ರಾಷ್ಟಮಟ್ಟದ ಕೋಡ್ ಫಿಯಿಸ್ಟಾ-4.0 ನಿರಂತರ 24 ತಾಸುಗಳ ಹ್ಯಾಕಥಾನ್ ಸ್ಪರ್ಧೆ ಇತ್ತೀಚೆಗೆ ಜರುಗಿತು.
ಬೆಳಗಾವಿಯ ಗೊಗಟೆ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅರುಣ ಪುಸ್ಕರ್, ಪ್ರಥಮ ಎಸ್, ಶ್ರೀರಾಮ ನಾಯಕ, ಪ್ರಭಾಲ ಎ.ಬಿ ಅವರನ್ನೊಳಗೊಂಡ ತಂಡವು ಪ್ರಥಮ ಸ್ಥಾನ ಗಳಿಸಿತು. ಲಕ್ಷ್ಮೇಶ್ವರದ ಅಗಡಿ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಮೃತೇಶ ಎನ್, ಶಿವಕುಮಾರ ಸಂಶಿ, ವಿನಾಯಕ ಕೆ, ಮಣಿಕಂಠ ಎಚ್ ಅವರನ್ನೊಳಗೊಂಡ ತಂಡವು ದ್ವಿತೀಯ ಸ್ಥಾನ ಹಾಗೂ ಗದಗದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ನಂದೀಶ ಕೆ, ಚನ್ನವೀರಗೌಡ ಪಾಟೀಲ, ಸೀಮಾ ಕುಲಕರ್ಣಿ, ಪಿಲೋಮೀನಾ ಕಂಬಳಿ ತಂಡವು ತೃತೀಯ ಸ್ಥಾನ ಪಡೆಯಿತು.
ಒಟ್ಟು 50ಕ್ಕೂ ಹೆಚ್ಚು ಕಾಲೇಜುಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂಬಾ ಸಾಪ್ಟವೇರ್ ಸೊಲ್ಯೂಷನ್ ಸಂಸ್ಥಾಪಕ ಪ್ರಶಾಂತ ಅಸೈಕರ, ಗುರುರಾಜ ನಾಯಕ, ಶೀತಲ್ ನಿರ್ಣಾಯಕರಾಗಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪರಶುರಾಮ ಬಾರ್ಕಿ ಪ್ರಶಸ್ತಿ ವಿತರಿಸಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ವಿಕ್ರಮ ಶಿರೋಳ, ಸಂಯೋಜಕರಾದ ಪ್ರಕಾಶ ಹೊಂಗಲ್, ರಾಜೇಶ್ವರಿ ಗಾಮನಗಟ್ಟಿ, ಶ್ರೀಕಾಂತ ಜೋಗರ, ಅರುಣ ಜೋಶಿ, ಸಾಯಿರಾಜ ಕೆ, ಪ್ರಿಯಾಂಕ ರಾಯರೆಡ್ಡಿ, ವೆಂಕಟೇಶ್ ಎಂ ಕಾರ್ಯಕ್ರಮ ನಿರ್ವಹಿಸಿದರು.