HomeEducationಪ್ರಾಮಾಣಿಕವಾಗಿ ವಿದ್ಯೆ ಕಲಿತಾಗ ಯಶಸ್ಸು

ಪ್ರಾಮಾಣಿಕವಾಗಿ ವಿದ್ಯೆ ಕಲಿತಾಗ ಯಶಸ್ಸು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ವಿದ್ಯೆಯನ್ನು ಕಲಿತಾಗ ಮಾತ್ರ ಯಶಸ್ಸು ಹಾಗೂ ಶ್ರೇಯಸ್ಸು ದೊರೆಯುತ್ತದೆ. ಪಾಲಕರು ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಂಡು ಸಮಾಜದಲ್ಲಿ ಉನ್ನತ ಸ್ಥಾನ ಪಡೆದಕೊಳ್ಳಲು ಸಾದ್ಯವಾಗುತ್ತದೆ ಎಂದು ಜೈವಿಜಯ ಕಂಪ್ಯೂಟರ್ ಶಿಕ್ಷಣ ತರಬೇತಿ ಸಂಸ್ಥೆಯ ಮುಖ್ಯಸ್ಥ ಮಂಜುನಾಥ ಗೌಡರ ಹೇಳಿದರು.

ಅವರು ಚಿಕ್ಕಹಂದಿಗೋಳದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಚಿಕ್ಕಹಂದಿಗೋಳ ಗ್ರಾ.ಪಂ ಸದಸ್ಯ ಶ್ರೀನಿವಾಸ ದ್ಯಾವನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಉದಯಕುಮಾರ ಪತ್ತಾರ, ದ್ವಿತೀಯ ಸ್ಥಾನ ಸಂಜನಾ, ತೃತೀಯ ಸ್ಥಾನ ಗಳಿಸಿದ ಪ್ರವೀಣ ಕುರಿಗೆ ಜೈವಿಜಯ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಿಂದ ಪ್ರೋತ್ಸಾಹ ಧನ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೆಂಕಟೇಶ್ವರ ಶಾಲಾ ಮುಖ್ಯಸ್ಥರಾದ ಶರಣಪ್ಪ ದಾಸರ, ಮುಖ್ಯ ಶಿಕ್ಷಕ ಆರ್.ವಿ. ಗೊಂಡಬಾಳ, ಗ್ರಾಮದ ಹಿರಿಯರಾದ ಬಸಲಿಂಗಯ್ಯ ಗುಡ್ಡಿಮಠ, ವಿರುಪಾಕ್ಷಯ್ಯ ತಾಳಿಕೋಟಿ ಮಠ, ದೇವಪ್ಪ ಸೈದಾಪೂರ, ವೀರನಗೌಡ ಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರ್.ವಿ. ಗೊಂಡಬಾಳ ಸ್ವಾಗತಿಸಿದರು. ಜಿ.ಸಿ. ನರೇಗಲ್ಲಮಠ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img