• About
  • Advertise
  • Privacy & Policy
  • Contact
Wednesday, October 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಬಡವರ ಬದುಕಿನ ಚೈತನ್ಯ

News Desk by News Desk
March 9, 2024
in Gadag News
prashasti

????????????????????????????????????

0
SHARES
1
VIEWS
Share on Facebook

ಬದುಕಿನಲ್ಲಿ ಬೆಳೆಯುವ ಛಲ ಒಂದಿದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅಕ್ಷರಶಃ ನಿರೂಪಿಸಿದವರು ಬಾಗಲಕೋಟೆಯ ಹೆಸರಾಂತ ಚರ್ಮರೋಗ ತಜ್ಞ ವೈದ್ಯರಾಗಿರುವ ಡಾ. ಮಹಾಜಬೀನ್ ಮಧುರಕರ್. ವಿಜಯಪುರ ಜಿಲ್ಲೆಯ ರಾಮಪುರ ಗ್ರಾಮದಲ್ಲಿ 19-11-1986ರಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮಹಾಜಬೀನ್‌ರವರು ನಿವೃತ್ತ ಕರಣಿಕರಾದ ಶ್ರೀ ಸಾಹೇಬ್ ಪಟೇಲ್ ಬಿ. ಮದರ್ಕರ್ ಮತ್ತು ಗೃಹಿಣಿ ಶಹಪುರಿ ಬೇಗಂ ಅವರ ಆರನೇಯ ಮಗಳು.

ಬಾಲ್ಯದಿಂದಲೇ ಗಾಲಿ ಕುರ್ಚಿಗೆ ಸೀಮಿತವಾಗಿ ಎಲ್ಲರಂತೆ ಬೆಳೆಯದೇ ತುಸು ವಿಭಿನ್ನವಾಗಿ ಬೆಳೆದು ನಿಂತಿದ್ದು ಸಾಹಸವೇ ಸರಿ. ತಂದೆ-ತಾಯಿಯ ಮುದ್ದಿನ ಮಗಳಾಗಿ, ಮೂರು ವರ್ಷದವರಿದ್ದಾಗ ಇದ್ದಕ್ಕಿಂತೆಯೇ ವ್ಯಾಪಕ ಜ್ವರಕ್ಕೆ ತುತ್ತಾಗಿ, ವೈದ್ಯರ ನಿರ್ಲಕ್ಷ್ಯವೋ, ವಿಧಿಯ ಆಟವೋ, ಔಷಧಿಯ ಅಸ್ಪಂದನೆಯೋ ಯಾರಿಗೂ ತಿಳಿಯದ ಪ್ರಶ್ನೆ. ವೈದ್ಯರ ಚುಚ್ಚುಮದ್ದಿನ ಪರಿಣಾಮ ಜ್ವರ ಉಲ್ಬಣಗೊಂಡು ವಿಧಿಯಾಟಕ್ಕೆ ಬಲಿಯಾಗಿ ಪೋಲಿಯೋ ರೋಗಕ್ಕೆ ತುತ್ತಾಗಬೇಕಾಯಿತು. ಮೂರು ವರ್ಷದ ಮಗುವಿಗೆ ಆದ ದುಷ್ಪರಿಣಾಮ ನೆನೆದ ತಾಯ್ತಂದೆಯರು ಮನದಲ್ಲಿ ಮರುಗುತ್ತ ಬಹಳವೇ ಕಷ್ಟಪಟ್ಟು ಅತ್ಯಂತ ಕ್ರಮಬದ್ಧವಾಗಿ ಜೋಪಾನ ಮಾಡಿ ಬೆಳೆಸಿದರು.

ತನಗಾದ ದೈಹಿಕ ಅಸ್ವಸ್ಥತೆಯನ್ನು ಲೆಕ್ಕಿಸದ ಮಹಾಜಬೀನ್‌ರವರು ತಮ್ಮ ಬುದ್ಧಿವಂತಿಕೆಯಿಂದ ಶಿಕ್ಷಣದಲ್ಲಿ ಅಪಾರ ಪ್ರಮಾಣದ ಏಳ್ಗೆಯನ್ನು ಕಂಡರು. ಪ್ರಾಥಮಿಕ ಶಿಕ್ಷಣವನ್ನು ಆಲಮಟ್ಟಿಯಲ್ಲಿ, ಪ್ರೌಢ ಶಿಕ್ಷಣವನ್ನು ವಿಜಯಪುರದ ಡಿ.ಎನ್.ದರ್ಬಾರ್ ಶಾಲೆಯಲ್ಲಿ ಪೂರ್ಣಗೊಳಿಸಿ ಶೇ.92 ಅಂಕಗಳನ್ನು ಪಡೆದರು.

ಸ್ವಾಭಿಮಾನದಿಂದ ಮುನ್ನಡೆದು ವಿಜಯಪುರದಲ್ಲಿ ಮುಂದಿನ ಶಿಕ್ಷಣ ಪಡೆಯಲು ಅನಾನುಕೂಲವಾದಾಗ ಧಾರವಾಡಕ್ಕೆ ಬಂದು ಎಸ್.ಡಿ.ಎಮ್. ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ತಮ್ಮ ಸಾಮರ್ಥ್ಯವನ್ನು ತೋರಿದವರು.

ಮುಂದೆ ವೈದ್ಯಕೀಯ ರಂಗವನ್ನು ಪ್ರವೇಶ ಮಾಡಿದ ಮಹಾಜಬೀನ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಮ್.ಬಿ.ಬಿ.ಎಸ್. ಅಧ್ಯಯನ ಆರಂಭಿಸಿದರು. ಹಾಸ್ಟೇಲ್‌ನಲ್ಲಿದ್ದಕೊಂಡು ಸ್ನೇಹಿತರ ಸಹಕಾರಗಳಿಂದ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದರು. ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಮ್.ಡಿ. ಕೋರ್ಸ್ ಸೇರ್ಪಡೆಗೊಂಡು ಚರ್ಮರೋಗ ವಿಭಾಗದಲ್ಲಿ ಸಂಶೋಧನೆ ಕೈಗೊಂಡರು. ಅಧ್ಯಯನ ಸಂದರ್ಭದಲ್ಲಿ ಅನೇಕ ರೋಗಿಗಳ ಚರ್ಮಕಾಯಿಲೆಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾದ ಮಹಾಜಬೀನ್ ಎಲ್ಲರ ಮೆಚ್ಚಿನವರಾದರು. ಇವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದವರ ಮುಂದೆಯೇ ಏನೆಲ್ಲ ಸಾಧನೆ ಮಾಡಿ ತೋರಿಸಿದರು.

sadhane

ತಮ್ಮ ಸಂಕಲ್ಪ ಮತ್ತು ದಿಟ್ಟ ನಡೆಗಳಿಂದ ವಿಕಲಾಂಗತೆಯನ್ನು ಹೋಗಲಾಡಿಸುವಲ್ಲಿ ಇಂದಿಗೂ ಸಹ ಉಚಿತ ಸೇವೆ ನೀಡುವ ಮುಖಾಂತರ ಲೋಕಪ್ರಖ್ಯಾತರಾಗಿದ್ದಾರೆ. ಬಾಗಲಕೋಟೆಯ ಹೃದಯಭಾಗದಲ್ಲಿ ಮದರಕರ್ ಆಸ್ಪತ್ರೆ ತೆರೆದು ಅನೇಕ ಉಚಿತ ಶಿಬಿರಗಳನ್ನು, ವೈದ್ಯಕೀಯ ತಪಾಸಣೆಗಳನ್ನು ಆಯೋಜಿಸಿ ಅನೇಕರಿಗೆ ಆಶಾಜ್ಯೋತಿಯಾಗಿದ್ದಾರೆ. ಡಾ. ಮಹಾಜಬೀನ್ `ಮದರಕರ್ ಚಾರಿಟೇಬಲ್ ಫೌಂಡೇಶನ್’ನ ನಿರ್ದೇಶಕರಾಗಿ, ಬೀಳಗಿಯ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನ ಚರ್ಮರೋಗಶಾಸ್ತç ವಿಭಾಗದ ಮುಖ್ಯಸ್ಥರಾಗಿ, ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಕಾರ್ಯನಿಷ್ಠೆ ಮತ್ತು ಸೇವಾತತ್ಪರತೆಯನ್ನು ಅವಗಾಹಿಸಿದ ಕರ್ನಾಟಕ ಸರ್ಕಾರ ಅಂಗವಿಲ ದಿನಾಚರಣೆಯಂದು 2014-15ನೇ ಸಾಲಿನ ರಾಜ್ಯಪ್ರಶಸ್ತಿ ನೀಡಿದೆ. ಅಲ್ಲದೇ ನಾಡಿನ ಹಲವಾರು ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಪದವಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ಇದೀಗ, ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಮಾ. 22ರಂದು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ, ನಾಡಿನ ಶ್ರೀಗಳ, ವಿವಿಧ ಗಣ್ಯಮಾನ್ಯ ಪ್ರತಿಷ್ಠಿತ ರಾಜಕೀಯ ಮುತ್ಸದ್ಧಿಗಳ, ಸದ್ಭಕ್ತರ ಸಹಯೋಗದಲ್ಲಿ ಜರುಗುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಧರ್ಮ ಸಮಾರಂಭದ ಸುಸಂದರ್ಭದಲ್ಲಿ ಅತ್ಯುನ್ನತವಾದ `ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯು ಕಂಚಿನ ಪತ್ರ ಸಮೇತ 1 ಲಕ್ಷ ರೂಪಾಯಿ ನಗದು ಬಹುಮಾನ ಹೊಂದಿದೆ.

– ಡಾ. ಗುರುಪಾದಯ್ಯ ವೀ. ಸಾಲಿಮಠ.
ಸವಣೂರು.

ವಿಶೇಷ ವಿಕಲ ಚೇತನರಿಗೆ ಮತ್ತು ವಯೋವೃದ್ಧರಿಗಾಗಿ ಮದರಕರ ಚಾರಿಟೇಬಲ್ ಸಂಸ್ಥೆಯನ್ನು ಸ್ಥಾಪಿಸಿ ಅತ್ಯುನ್ನತ ಸ್ತರದ ನೆರವನ್ನು ಚಾಚಿದವರು. ವಿಶೇಷ ಚೇತನರ ಮತ್ತು ವಯೋವೃದ್ಧರ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಔಷಧೋಪಚಾರಗಳನ್ನು ಬಡವರಿಗೆ ಉಚಿತವಾಗಿ ನೀಡುವುದಲ್ಲದೇ ಸಮಗ್ರ ಆರೋಗ್ಯಯುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟು ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಲಕ್ಷಾಂತರ ಜನರ ಬದುಕಿಗೆ ವಿಶೇಷ ಚೈತನ್ಯವಿಟ್ಟು ಆರೋಗ್ಯಪೂರ್ಣ ಬದುಕನ್ನು ನೀಡಿರುವುದು ಸಂತೋಷದ ಸಂಗತಿ.

Tags: Dr. Gurupadiah Vee. Salimath.Dr. Mahajabeen MadhurakarShahpuri BegumShri Jagadguru Renukacharya AwardShri Saheb Patel b. Madarkar
ShareSendShare
Previous Post

ಮುತ್ತಿನಪೆಂಡಿಮಠರದ್ದು ಉದಾತ್ತ ವ್ಯಕ್ತಿತ್ವ

Next Post

ಮಹಿಳೆಯರ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

News Desk

News Desk

Next Post
sports

ಮಹಿಳೆಯರ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

October 28, 2026
ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

October 28, 2026
ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

October 28, 2026
ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

October 28, 2026
ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper