ವಿಜಯಸಾಕ್ಷಿ ಸುದ್ದಿ, ಮುಳಗುಂದ : ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದದ್ದು ಎಂದು ದ್ರಾಕ್ಷಾಯಿಣಿ ಅಳವಂಡಿ ಹೇಳಿದರು.
ಅವರು ಸಮೀಪದ ನೀಲಗುಂದ ಗುದ್ನೇಶ್ವರಮಠದ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಹಾಶಿವರಾತ್ರಿ ಅಂಗವಾಗಿ ಶಿವರಾತ್ರಿ ಜಾಗರಣೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾದಾನವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ನೀಡುತ್ತಿರುವುದು ಅತ್ಯಂತ ಶ್ಲಾಘನಿಯವಾದ ಕಾರ್ಯವಾಗಿದೆ. ಇಂತಹ ಸಂಸ್ಥೆಯಲ್ಲಿ ಕಲಿತ ಮಕ್ಕಳು ಪುಣ್ಯವಂತರು, ಇಲ್ಲಿ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ದೊರೆಯುತ್ತಿದೆ ಎಂದರು.
ಶಿವರಾತ್ರಿ ಜಾಗರಣೆಯಲ್ಲಿ ಹುಬ್ಬಳ್ಳಿ ಆರ್ಶೀವಾದ ನೃತ್ಯ ಕಲಾ ಕೇಂದ್ರದ ವಿದುಷಿ ಶೈಲಾ ಕಟಗಿ ಇವರಿಂದ ಭರತನಾಟ್ಯ, ಮಲ್ಲಿಕಾರ್ಜುನ ಭಜಂತ್ರಿ ಇವರಿಂದ ಶಹನಾಯಿವಾದ, ನಾರಾಯಣ ಹಿರೇಕೊಳಚಿ ಇವರಿಂದ ವಯೋಲಿನ್ ವಾದನ, ಮಲ್ಲಪ್ಪ ಹೊಂಗಲ ಇವರಿಂದ ಹಾಸ್ಯ ಸಂಜೆ, ಸೌಮ್ಯಾ ಓಸವಾಲ ಇವರಿಂದ ಸಂಗೀತ ಸೇವೆ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಹೊಸಳ್ಳಿ ಬೂದಿಶ್ವರಮಠದ ಬೂದಿಶ್ವರ ಮಾಹಾಸ್ವಾಮಿಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವ ಧುರೀಣ ಕೃಷ್ಣಗೌಡ.ಎಚ್. ಪಾಟೀಲ್, ಎಂ.ಡಿ. ಬಟ್ಟೂರ, ಬೆಂಗಳೂರು ಡಿಐಜಿಪಿ ರವಿ ಚನ್ನಣ್ಣವರ, ಅಪ್ಪಣ್ಣಾ ಇನಾಮತಿ, ವಿ.ಎಸ್. ನೀಲಗುಂದ ಪಾಲ್ಗೊಂಡಿದ್ದರು. ಗೌರಮ್ಮಾ ಬಡ್ನಿ, ವಿ.ಪಿ. ಹಿರೇಮಠ, ಎಸ್.ಎಲ್. ನೇಕಾರ ಅವರನ್ನು ಸನ್ಮಾನಿಸಲಾಯಿತು.