ವಿಜಯಸಾಕ್ಷಿ ಸುದ್ದಿ, ಗದಗ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 23ನೇ ಘಟಿಕೋತ್ಸವದಲ್ಲಿ ಬೆಂಗಳೂರಿನ ಕಮ್ಮವಾರಿ ಸಂಘದ ಕೆ.ಎಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜಮೆಂಟ್‌ನ ಎಲೆಕ್ಟಾನಿಕ್ & ಕಮ್ಯೂನಿಕೇಶನ್ ವಿಭಾಗದಲ್ಲಿ ಅಸಿಸ್ಟಂಟ್ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೇಣುಕಾ ವೀರಪ್ಪ ತಾಳಿ ‘ಕ್ಲಾಸಿಫಿಕೇಶನ್ ಆಫ್ ವೈಟ್ ಬ್ಲಡ್ ಸೆಲ್ ಮೈಕ್ರೋಸ್ಕೋಪಿಕ್ ಬ್ಲಡ್ ಸ್ಮಿಯರ್ ಯೂಸಿಂಗ್ ಮಷಿನ್ ಲರ್ನಿಂಗ್ ಟೆಕ್ನಿಕ್’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಡಾ. ಬಿ. ಸುರೇಖಾ ಮಾರ್ಗದರ್ಶಕರಾಗಿದ್ದರು. ಪ್ರೊ. ರೇಣುಕಾ ತಾಳಿ ಇವರು ಕೆವಿಎಸ್‌ಆರ್ ಕಾಲೇಜಿನ ನಿವೃತ್ತ ಇಂಗಿಷ್ ಪ್ರಾಧ್ಯಾಪಕ ಪ್ರೊ. ವೀರಪ್ಪ ತಾಳಿ ಅವರ ಸುಪುತ್ರಿ. ರೇಣುಕಾ ತಾಳಿ ಅವರ ಸಹೋದ್ಯೋಗಿಗಳು ಹಾಗೂ ಬಂಧು-ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.



