ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಮಷಿನ್ ಲರ್ನಿಂಗ್‌ನಿಂದ ನೂತನ ಆವಿಷ್ಕಾರ ಸಾಕಷ್ಟು ಬೆಳವಣಿಗೆ ಹೊಂದಿ ಉಪಯುಕ್ತವಾಗಿವೆ ಎಂದು ಐಐಟಿ ಧಾರವಾಡದ ಡಾ. ದೀಲಿಪ ಎ.ಡಿ. ಹೇಳಿದರು.
ಅವರು ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಂ.ಅಗಡಿ ಅಭಿಯಾಂತ್ರಿಕ ಮತ್ತು ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹೊಸ ತಂತ್ರಜ್ಞಾನದ ಪ್ರಭಾವದಿಂದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳು ಸಿಗುತ್ತಿವೆ. ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ರಿಯಾಶೀಲತೆ, ವಿಶೇಷ ಜ್ಞಾನ, ಪರಿಣತಿ ಹೊಂದಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಗಡಿ ಇಂಜಿನಿಯರಿಂಗ್ ಕಾಲೇಜು ವಿಶೇಷವಾದ ಸೌಲಭ್ಯ, ಸೂಕ್ತ ವೇದಿಕೆ, ವಾತಾವರಣ ಕಲ್ಪಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಟೆಕ್ಕೋ ಫಾರ್ಚುನ್‌ನ ಮಲ್ಲಿಕಾರ್ಜುನ ಕುಲಕರ್ಣಿ, ರವಿಚಂದ್ರ ಮಸೂತಿ ಮಾತನಾಡಿದರು. ಪ್ರಾಚಾರ್ಯ ಡಾ.ಪರಶುರಾಮ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ.ರಾಜಶೇಖರ ಕುನಬೇವು, ಡಾ.ಸಪ್ಪಾ ಚನ್ನಪ್ಪಗೌಡ್ರ, ಶ್ರದ್ಧಾ ಜುಪತಿಮಠ, ಮೇಘಾ ಪಾಶೆಟ್ಟಿ ಪ್ರೊ.ದಯಾನಂದ ಬಡಿಗಣ್ಣನವರ, ಪ್ರೊ.ಷಣ್ಮುಖ ಜಿ. ಇದ್ದರು. ಪ್ರೊ.ಪ್ರತಿಮಾ ಮಹಾಪುರುಷ ಸ್ವಾಗತಿಸಿದರು. ಸುಭಾಶ ಮೇಟಿ ವಂದಿಸಿದರು.