22.7 C
Gadag
Sunday, December 10, 2023
Home Blog

ಹೋಮ್ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ರಾಡ್’ನಿಂದ ಹೊಡೆದ ಶಿಕ್ಷಕಿ

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಖಾಸಗಿ ಶಾಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಈ ಘಟನೆ 3 ದಿನಗಳ ಹಿಂದೆ ನಗರದ ಖಾಸಗಿ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 7ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಫರ್ದೀನ್‍ಗೆ ಹೋಂ ವರ್ಕ್ ಮಾಡಿಲ್ಲವೆಂದು ಶಾಲಾ ಶಿಕ್ಷಕಿ ಕೈಗೆ ರಾಡ್‍ನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತ ವಿದ್ಯಾರ್ಥಿ ಕೈಗೆ ಗಂಭೀರ ಗಾಯಗಳಾಗಿದ್ದು, ಹುಳಿಮಾವು ಸಾಯಿ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫರ್ದಿನ್ ಕೈಗೆ ಆರು ಹೊಲಿಗೆ ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ, ಅಸೈನ್ಮೆಂಟ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾನೆ. ಶಾಲಾ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ ಮಾಡುವ ಆರೋಪವೂ ಕೇಳಿಬಂದಿದೆ.

ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಅರೆಸ್ಟ್

0

ಬೆಂಗಳೂರು: ನಮ್ಮ ಮೆಟ್ರೋ ದಲ್ಲಿ ಹಿಂದೆ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದೀಗ ಮತ್ತೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ.  ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈಕೈ ಮುಟ್ಟಿದ್ದು, ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿ ಲೋಕೇಶ್ನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.

ತನಿಖೆಯ ವೇಳೆ ಆರೋಪಿ ಲೋಕೇಶ್ ಕರಾಳ ಇತಿಹಾಸ ಬಯಲಾಗಿದ್ದು, ಈತನ ಮೇಲೆ ಹಿಂದೆ ಕೂಡ ಕೆಲ ಕೇಸ್ಗಳಿತ್ತು. ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನು ಕಾಯಕ ಮಾಡಿರುವ ವಿಷಯ ಬಯಲಾಗಿದೆ. ಆರೋಪಿ ಬಳಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಇರಾನಿಗ್ಯಾಂಗ್ ಸದಸ್ಯ ಬಂಧನ

0

ಮಂಡ್ಯ: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಇರಾನಿಗ್ಯಾಂಗ್ ಸದಸ್ಯನನ್ನು ಮಂಡ್ಯದ ಮದ್ದೂರು ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಸಿದ್ದಾರೆ. ಬೀದರ್ ಮೂಲದ ಜಾವೀದ್ ಬಾಲಿ(45) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಸುಮಾರು 28 ಲಕ್ಷ ರೂ ಮೌಲ್ಯದ 435 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬೀದರ್ ನಿಂದ ಮಂಡ್ಯಕ್ಕೆ ಕಾರಿನಲ್ಲಿ ಬಂದು ಸರಕಳ್ಳತನ ಮಾಡುತ್ತಿದ್ದನು.

ಮಂಡ್ಯದಲ್ಲಿ ಬೈಕ್ ಎಸ್ಕೇಪ್ ಮಾಡಿ ಸರಗಳ್ಳತನ ಮಾಡುತ್ತಿದ್ದು, ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದನು. ಕಳೆದ ತಿಂಗಳು ಮದ್ದೂರಿನಲ್ಲಿ ವೃದ್ದೆಗೆ ಸಾಯಿಬಾಬ ಭಕ್ತನ ಸೋಗಿನಲ್ಲಿ 62 ಗ್ರಾಂ ಚಿನ್ನದಸರ ಕಸಿದು ಪರಾರಿಯಾಗಿದ್ದ. ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ ಸರಗಳ್ಳತನ ಮಾಡಿದ್ದ ಆರೋಪಿ ಬೀದರ್ ಗೆ ಎಸ್ಕೇಪ್ ಆಗಿದ್ದ. ಸದ್ಯ ಮದ್ದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು,  ಜಾವೀದ್ ಬಾಲಿಗೆ ಸಾಥ್ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಲಾರಿಗೆ ಕ್ಯಾಂಟರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

0

ತುಮಕೂರು: ತುಮಕೂರಿನ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ವಾಹನವು ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಯಾಂಟರ್ನಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ಸಾವನ್ನಪ್ಪಿದ್ದಾರೆ.

ಮೃತರು ಹಾಸನ ಹಾಗೂ ಚಿತ್ರದುರ್ಗ ಮೂಲದವರು ಎನ್ನಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯನಗರ ಜಿಲ್ಲಾಧಿಕಾರಿ ಸೈಕಲ್ ಸವಾರಿ: ಹೊಸಪೇಟೆ ಸಿಟಿ ರೌಂಡ್ಸ್

0

ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಎಂಎಸ್ , ಹೊಸಪೇಟೆ ನಗರ ಪ್ರದಕ್ಷಣೆ ಮಾಡಿ,  ಸಂಡೂರು ರಸ್ತೆ ಸಾಯಿಬಾಬಾ ಸರ್ಕಲ್,  ಎಪಿಎಂಸಿ ರೋಡ್ ಸಿದ್ಧಿಪ್ರಿಯ ಸರ್ಕಲ್, ವಿಜಯನಗರ ಕಾಲೇಜ್, ಅಂಬೇಡ್ಕರ್ ಸರ್ಕಲ್ ಸರ್ಕಾರಿ ಬಸ್ ನಿಲ್ದಾಣ ವಾರ್ಡ್ ನಂಬರ್ 8 ಮತ್ತು 9 ಇಂದಿರಾನಗರ ಇನ್ನು ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಕಸ ವಿಲೇವಾರಿ ಒಳಚರಂಡಿ ಕುಡಿಯುವ ನೀರಿನ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು.

ಬೀದಿ ನಾಯಿಗಳ ಕಾಟ, ಒತ್ತುವರಿ, ಸಮುದಾಯ ಶೌಚಾಲಯಗಳ ಸ್ವಚ್ಛತೆ, ಕೇಂದ್ರ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಸ್ವಚ್ಛತೆ ಮತ್ತು ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ನಾಗರಿಕರಿಂದ ಮಾಹಿತಿ ಪಡೆದರು.

ನಗರಸಭೆ ಅಧಿಕಾರಿಗಳಿಗೆ ಸ್ವಚ್ಛತೆ ಇಲ್ಲದಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಇದೇ ರೀತಿ ಮುಂದೆ ನಗರ ಪ್ರದಕ್ಷಣೆ ಮಾಡಲಾಗುವುದು ಏನಾದರೂ ಲೋಪದೋಷ ಕಂಡುು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

ರಾಜ್ಯದ ಸಿಎಂ ಆಗುವ ಯೋಗ ಡಿಕೆ ಶಿವಕುಮಾರ್’ಗೆ ಇದೆ: ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ

0

ಮಂಡ್ಯ: ಸಿಎಂ ಕುರ್ಚಿಯ ಚರ್ಚೆಯ ಬೆನ್ನಲ್ಲೇ ಈ ಸ್ವಾಮೀಜೀಯ ಹೇಳಿಕೆ ಭಾರೀ ಕುತೂಹಲ ಹೆಚ್ಚಿಸಿದೆ.  ಡಿ.ಕೆ ಶಿವಕುಮಾರ್‌ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗ್ತಾರೆ, ಅದಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಶ್ರೀ ಕರಿವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮಂಡ್ಯದ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದ ಶ್ರೀ ಪಟ್ಟಲದಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಡಿ.ಕೆ ಶಿವಕುಮಾರ್‌ ರಾಜ್ಯದ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಸರ್ಕಾರ ಸಿಎಂ ಆಯ್ಕೆ ಮಾಡುವ ವಿಚಾರದಲ್ಲಿ ಮೀಸಲಾತಿ  ಪ್ರಕಟಿಸುವುದು ಉತ್ತಮ ಅದು ಎಲ್ಲರಿಗೂ ಅನುಕೂಲವಾಗಲಿದೆ. ಎಲ್ಲಾ ಸಮುದಾಯಗಳು ಇನ್ನಷ್ಟು ಹೆಚ್ಚಾಗಿ ಸಂಘಟನೆಯಲ್ಲಿ ಬೆಳೆಯುವವರೆಗೆ ರಾಜಕೀಯದಲ್ಲಿಯೂ ಮೀಸಲಾತಿ ಕೊಟ್ಟು ಮುಂದುವರಿಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಮಠಾಧೀಶರು, ಮೌಲ್ವಿಗಳು, ಪಾದ್ರಿಗಳೂ ರಾಜಕಾರಣ ಮಾಡಬಾರದು: ನಿಜಗುಣಾನಂದ ಸ್ವಾಮೀಜಿ

0

ಧಾರವಾಡ: ಡಿಕೆಶಿ ಸಿಎಂ ಆಗಲಿ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಕೊಟ್ಟ ವಿಚಾರವಾಗಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕತಿ, ಸಂಸ್ಕಾರದ ವಿಚಾರಧಾರೆಗಳಿರಬೇಕು. ಈಗ ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ. ಮಠಾಧೀಶರು ರಾಜಕಾರಣದಲ್ಲಿದ್ದಾರೆ ಎಂಬ ವಿಚಾರ ಒಂದು ಕಡೆ ಆದರೆ,

ಮಾಧ್ಯಮಗಳೂ ಸಹ ರಾಜಕಾರಣದ ವರ್ಗದಲ್ಲಿದೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ ಎಂದರು. ಒಂದೊಂದು ಚಾನೆಲ್‌ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸಿದರೆ, ಕೆಲ ಚಾನೆಲ್‌ಗಳು ಕೆಲ ರಾಜಕಾರಣಿಗಳನ್ನು ನಿರಾಕರಿಸುತ್ತವೆ. ಈಗ ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿದೆ. ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ ಎಂದರು.

ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ. ಧರ್ಮ, ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳೂ ಕೂಡ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರೂ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು. ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಅವರನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು.ರಾಜಕಾರಣಿಗಳು ಸ್ವಾಮೀಜಿಗಳನ್ನು ಬೇರೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕು ಎಂದರು.

ಯತ್ನಾಳ್ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ: ಎಂ.ಬಿ ಪಾಟೀಲ್

0

ವಿಜಯಪುರ: ತನ್ವೀರ್ ಪೀರಾ ಅವರು ಯಾವ ಉಗ್ರ ಸಂಘಟನೆಯೊಂದಿಗೂ ಸಂಬಂಧ ಹೊಂದಿಲ್ಲ. ಬೇಕಿದ್ದರೆ ಎನ್‍ಐಎ ತನಿಖೆಗೆ ಕೊಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.  ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಸುಳ್ಳುಗಾರ ಎಂದರು.

ತನ್ವೀರ್ ಪೀರಾ ಅವರು ಯಾವ ಉಗ್ರ ಸಂಘಟನೆಯೊಂದಿಗೂ ಸಂಬಂಧ ಹೊಂದಿಲ್ಲ. ಬೇಕಿದ್ದರೆ ಎನ್‍ಐಎ ತನಿಖೆಗೆ ಕೊಡಲಿ. ಆರೋಪ ಸುಳ್ಳು ಎಂದು ಸಾಬೀತಾದರೆ ಏನು ಮಾಡ್ತಾರೆ? ಎಂಬುದನ್ನು ಅವರು ಹೇಳಲಿ. ನಾವು ಅವರಿಗೆ ದೇಶ ಬಿಟ್ಟು ಹೋಗಿ ಎಂದು ಹೇಳುವುದಿಲ್ಲ. ಈ ಬಗ್ಗೆ ಅವರು ಸ್ಪಷ್ಟನೆ ಕೊಡಲಿ ಎಂದು ಸವಾಲ್ ಹಾಕಿದ್ದಾರೆ.

ಮುಖ್ಯಮಂತ್ರಿ ಅವರನ್ನು ನಾನೇ ತನ್ವೀರ್ ಪೀರಾ ಅವರ ಮನೆಗೆ ಕರೆದುಕೊಂಡು ಹೋಗಿದ್ದೆ. ಅವರೊಂದಿಗೆ ನಮ್ಮ ಒಡನಾಟ ಮೊದಲಿನಿಂದಲೂ ಇದೆ. ಯತ್ನಾಳ್ ಹಾಗೂ ತನ್ವೀರ್ ಪೀರಾ ಕುಟುಂಬಸ್ಥರ ಉದ್ಯಮಗಳು ಇದ್ದವು. ಹೋಟೆಲ್ ಹಾಗೂ ಇನ್ನಿತರೆ ಉದ್ಯಮದಲ್ಲಿ ಇವರೊಟ್ಟಿಗೆ ಅನೇಕರು ಪಾಲುದಾರರಾಗಿದ್ದರು. ಯತ್ನಾಳ್ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಹಿಂದೂ ಸಂಪ್ರದಾಯದಂತೆ ನೇರವೇರಿದ ಲೀಲಾವತಿ ಅವರ ಅಂತ್ಯಕ್ರಿಯೆ

0

ನೆಲಮಂಗಲದ ಸೋಲದೇವನಹಳ್ಳಿ ತೋಟದಲ್ಲೇ ಹಿಂದೂ ಸಂಪ್ರದಾಯದಂತೆ ಲೀಲಾವತಿ ಅವರ ಅಂತ್ಯಕ್ರಿಯೆ ನಡೆಯಿತು. ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದರು.  ಬೆಂಗಳೂರಿನಿಂದ ಪಾರ್ಥಿವ ಶರೀರ ಹೊತ್ತು ತಂದ ಅಂಬುಲೆನ್ಸ್ ಅನ್ನು ಅಲ್ಲಲ್ಲಿ ತಡೆದು, ಲೀಲಾವತಿ ಅವರ ಅಂತಿಮ ದರ್ಶನ ಪಡೆದರು ಅಭಿಮಾನಿಗಳು.

ಅದರಲ್ಲೂ ಸೋಲದೇವನಹಳ್ಳಿ ಸುತ್ತಲಿನ ಅನೇಕ ಗ್ರಾಮಸ್ಥರು, ಮನವಿ ಮಾಡಿಕೊಂಡು ಅಂಬುಲೆನ್ಸ್ ನಿಲ್ಲಿಸುವಲ್ಲಿ ಯಶಸ್ವಿ ಆದರು. ತಮ್ಮ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆದರು.  ಬೆಂಗಳೂರಿನಿಂದ ತಂದೆ ಪಾರ್ಥಿವ ಶರೀರವನ್ನು ನವಿಲಿನಾಕೃತಿಯ ವಿಶೇಷ ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು.

200 ಮೀಟರ್ ಉದ್ದ ಪಾರ್ಥಿವ ಶರೀರದ ಮೆರವಣಿಗೆ ಕೂಡ ಮಾಡಲಾಯಿತು. ನಂತರ ಪೊಲೀಸ್ ಗೌರವ ಸಲ್ಲಿಸಲಾಯಿತು. ಅನೇಕ ಗಣ್ಯರು ಮತ್ತೊಂದು ಬಾರಿ ಅಂತಿಮ ನಮನ ಸಲ್ಲಿಸಿದ ಬಳಿಕ ಹಿಂದೂ ಸಂಪ್ರದಾಯದಂತೆ ಅಗಲಿದ ನಟಿಯ ಅಂತ್ಯ ಸಂಸ್ಕಾರ ನಡೆಸಲಾಯಿತು.

ಸಮಾಜ ಸೇವೆಯ ಮೂಲಕ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು: ಶೋಭಾ ಕರಂದ್ಲಾಜೆ

0

ಉಡುಪಿ: ಹಿರಿಯ ನಟಿ ಲೀಲಾವತಿ ಅಗಲಿದ್ದಾರೆ. ಬಣ್ಣದ ಲೋಕವೇ ಹಾಗೆ. ನಮ್ಮ ಜೀವನವೇ ಹಾಗೆ. ಲೀಲಾವತಿ ಕೊನೆಯ ದಿನದವರೆಗೂ ಕಷ್ಟದ ಜೀವನ ಸಾಗಿಸಿದರು. ದುಃಖದಲ್ಲಿ ಎಲ್ಲಾ ಅಪಮಾನಗಳನ್ನು ಸಹಿಸಿಕೊಂಡು ಜೀವಿಸಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೀಲಾವತಿ ದುಃಖವನ್ನು ನುಂಗಿ ಬದುಕಿದ ಕಲಾವಿದೆ. ಸಮಾಜಕ್ಕೆ ಏನಾದರೂ ಮಾಡಬೇಕೆಂದು ಬೆಂಗಳೂರಿನಿಂದ ದೂರ ಹೋಗಿ ನೆಲಮಂಗಲದಲ್ಲಿ ನೆಲೆಸಿದರು. ಸಮಾಜ ಸೇವೆಯ ಮೂಲಕ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು. ಬಣ್ಣದ ಬದುಕು ಕಷ್ಟ. ಲೀಲಾವತಿಯವರ ಬದುಕು ಇನ್ನೂ ಕಷ್ಟ ಎಂದರು.

ಲೀಲಾವತಿ ನಮ್ಮೂರಿನವರು. ನನಗೆ ಸಿಕ್ಕಾಗೆಲ್ಲ ತುಳುವಿನಲ್ಲೇ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ  ನೆಲೆಸಿ ಚಲನಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದಾರೆ. ಸಮಾಜ ಸೇವೆ, ಪ್ರಾಣಿಗಳ ಸೇವೆಯ ಮೂಲಕ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ವಿನೋದ್ ರಾಜ್, ಕುಟುಂಬ ಬಂಧು ಬಳಗಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದರು.