ಹೈದರಾಬಾದ್:- ಹೈದರಾಬಾದ್‌ನ ಹಯಾತ್ ನಗರದ ಎಂಪಿಪಿ ಶಾಲೆಯಲ್ಲಿ ಕಬ್ಬಿಣದ ಗೇಟ್ ಬಿದ್ದು ತಲೆಗೆ ಪೆಟ್ಟಾದ ಕಾರಣ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಅಜಯ್ ಮೃತ ಬಾಲಕ. ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಶಾಲೆಯ ಕಬ್ಬಿಣದ ಗೇಟ್ ಬಳಿ ಆಟವಾಡುತ್ತಿದ್ದಾಗ ಘಟನೆ ನಡೆದಿದೆ.
ಶಾಲೆಯಲ್ಲಿ ಕೆಲವು ಮಕ್ಕಳು ಗೇಟ್ ಮೇಲೆ ಏರಿ ಅದನ್ನು ಅತ್ತಿಂದಿತ್ತ ತಿರುಗಿಸುತ್ತಾ ಆಟವಾಡುತ್ತಿದ್ದರು. ಈ ವೇಳೆ ಅಜಯ್ ಕೂಡ ಆಟವಾಡುತ್ತಿದ್ದನು. ಗೇಟ್‌ನ ಜಾಯಿಂಟ್‌ಗಳು ಮುರಿದು ಅಲ್ಲಿಯೇ ಆಡುತ್ತಿದ್ದ ಅಜಯ್ ಮೇಲೆ ಬಿದ್ದಿದೆ.
ಇದರಿಂದಾಗಿ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.