ಬೆಂಗಳೂರು:- ಕಾರು ಮತ್ತು ಬೈಕ್ ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲಿಯೇ ಯುವಕ-ಯುವತಿ ಗಲಾಟೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆರೆಕೋಡಿ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ಜರುಗಿದೆ.
ಓರ್ವ ಯುವತಿ ಮತ್ತು ಯುವಕನ ನಡುವೆ ನಡೆದ ತಳ್ಳಾಟ ಗಲಾಟೆಯಲ್ಲಿ ಅವಾಚ್ಯವಾಗಿ ಒಬ್ಬರಿಗೊಬ್ಬರು ನಿಂದಿಸಿಕೊಂಡಿದ್ದಾರೆ. ಗಲಾಟೆ ಕಾರಣಕ್ಕೆ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಟಚ್ ಆಗಿದ್ದಕ್ಕೆ ಕೈಯಿಂದ ಪರಸ್ಪರ ಮಿರರ್ ಡ್ಯಾಮೇಜ್ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



