ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುಂಬಳಗೋಡು ಠಾಣೆ ವ್ಯಾಪ್ತಿಯ ಹೊಸ ಪಾಳ್ಯದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಅಮಿತ್ (25) ಕೊಲೆಯಾದ ಯುವಕನಾಗಿದ್ದು, ಆಕಾಶ್ ಮತ್ತು ರವಿ ಎಂಬುವರಿಂದ ಕೊಲೆ ಮಾಡಲಾಗಿದೆ.
ಕುಂಬಳಗೋಡಿನ ಕಾಂಕ್ರೆಟ್ ಪ್ಲಾಂಟ್ ಬಳಿ ಕಳೆದ ರಾತ್ರಿ ಅಮಿತ್, ರವಿ, ಆಕಾಶ್ ಮೂರ ಜನರು ಪಾರ್ಟಿ ಮಾಡ್ತಿದ್ದರು. ಈ ವೇಳೆ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿ ಮಾರಕಾಸ್ತ್ರದಿಂದ ಅಮಿತ್ ಮೇಲೆ ಹಲ್ಲೆ ಮಾಡಲಾಗಿತ್ತು.
ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಮಿತ್ ಸಾವನ್ನಪ್ಪಿದ್ದಾನೆ. ರವಿಗೆ ಅಮಿತ್ ಮತ್ತು ಆಕಾಶ್ ಇಬ್ಬರು ಸ್ನೇಹಿತರಾಗಿದ್ದರು.. ಆಗಾಗ ಪ್ಲಾಂಟ್ ನಲ್ಲಿ ಪಾರ್ಟಿ ಮಾಡ್ತಿದ್ದರು. ಅದೇ ರೀತಿ ನಿನ್ನೆ ಪಾರ್ಟಿ ಮಾಡೋವಾಗ ಗಲಾಟೆಯಾಗಿ ಕೊಲೆಯಾಗಿದೆ. ಇನ್ನೂ ಈ ಘಟನೆ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


