ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರವನ್ನು ಸುಂದರಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರ ಶ್ರಮಿಸಲಿದ್ದು, ಸಾರ್ವಜನಿಕರು ಸಲಹೆ-ಸೂಚನೆಯೊಂದಿಗೆ ಸಹಕಾರ ನೀಡಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ ಹೇಳಿದರು.
ಅವರು ಗುರುವಾರ ಗದಗ ಗ್ರೇನ್ ಮಾರುಕಟ್ಟೆಯಲ್ಲಿ ಹಣ್ಣು, ಹೂವು ಎಲೆ ಹಾಗೂ ಇತರೆ ಕಿರುಕೂಳ ವ್ಯಾಪಾರಸ್ಥರ ಸಂಘ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಔಪಚಾರಿಕವಾಗಿ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯಾಪ್ತಿಯಲ್ಲಿ ಮಾಡಬಹುದಾದ ನಗರಾಭಿವೃದ್ಧಿ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.
ಸಂಘದ ಅಧ್ಯಕ್ಷ ಅಬ್ದುಲ್‌ರೆಹಮಾನ ಹುಯಿಲಗೋಳ ಮಾತನಾಡಿ, ಸಂಘದ ಕಾರ್ಯಾಲಯಕ್ಕಾಗಿ ನಿವೇಶನ ಅವಶ್ಯವಿದ್ದು, ಈ ಕುರಿತು ಹಿಂದಿನ ಈರ್ವರು ಅಧ್ಯಕ್ಷರಿಗೆ ಹಾಗೂ ಪ್ರಾಧಿಕಾರದ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಈ ಬಗ್ಗೆ ಪ್ರಾಧಿಕಾರದ ನಿಯಮಗಳಿಗೆ ಒಳಪಟ್ಟು ಕಾನೂನು ಅನ್ವಯ ಅವಕಾಶ ನೋಡಿಕೊಂಡು ಪರಾಮರ್ಶಿಸಲಾಗುವದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಶರಣಪ್ಪ ಸಾಸನೂರ, ಉಪಾಧ್ಯಕ್ಷ ರಾಜೇಸಾಬ ಅಡರಕಟ್ಟಿ, ಕಾರ್ಯದರ್ಶಿ ಶರಣು ಶಿಗ್ಲಿ, ಸಹಕಾರ್ಯದರ್ಶಿ ಮೇಹರ್ ಅಲಿ ಢಾಲಾಯತ, ಸದಸ್ಯರಾದ ಎ.ಎನ್. ಅನ್ಸಾರಿ, ರಿಯಾಜ ಅನ್ವರ್ ಖಾಜಿ, ವಿಜಯಕುಮಾರ ಬಾಗಮಾರ, ಗಣಪತಿ ಪಟಗೆ, ವೆಂಕಟರಮನ್ ಗುತ್ತಲ, ಮಹ್ಮದ್‌ಅಲಿ ರೋಣ, ಅಶ್ರಫ್‌ಅಲಿ ನಸಬಿ, ಅಜ್ಜಣ್ಣ ಮುಧೋಳ, ಪಿ.ಎಸ್. ಅರಸಿದ್ದಿ, ಅಶೋಕ ಭಾಂಡಗೆ, ಪರವೇಜ್ ಬೇಲೇರಿ, ತಿಪ್ಪಣ್ಣ ನೋನಾರೆ, ಮಹ್ಮದ್‌ಅಲಿ ತಂಬಾಕದ, ಮಂಜು ಲಕ್ಕುಂಡಿ, ಯಲ್ಲವ್ವ ಉಳ್ಳಿಕಾಶಿ ಮುಂತಾದವರಿದ್ದರು.