ಹಬ್ಬಕ್ಕೆ ತವರು ಮನೆಗೆ ಬರದ ಪತಿಯ ಜೊತೆ ಜಗಳ ಮಾಡಿ ವಿಡಿಯೋ ಕಾಲ್ ನಲ್ಲೇ ಪ್ರಾಣಬಿಟ್ಟ ಹೆಂಡತಿ

0
Spread the love

ಬೆಂಗಳೂರು:-ರಾಜಧಾನಿ ಬೆಂಗಳೂರಿನ ಭಾರತಿನಗರದಲ್ಲಿ ದೀಪಾವಳಿ ಹಬ್ಬಕ್ಕೆ ಗಂಡ ತವರು ಮನೆಗೆ ಬರಲಿಲ್ಲ ಎಂದು ಸಿಟ್ಟಾದ ಪತ್ನಿ, ಪತಿಗೆ ವಿಡಿಯೋ ಕಾಲ್ ಮಾಡಿ ಬೈದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

21 ವರ್ಷದ ಆರ್. ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರತಿನಗರ ನಿವಾಸಿ ಎನ್ನಲಾಗಿದೆ. ಈಕೆ ಪತಿಯೊಂದಿಗೆ ವಿಡಿಯೋ ಕಾಲ್ನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಉಮೇಶ್ ವಿರುದ್ಧ ಮೃತಳ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೀಪಾವಳಿಗೆಂದು ತವರು ಮನೆಗೆ ಬಂದಿದ್ದ ಈಕೆ ಹಬ್ಬಕ್ಕೆ ಪತಿ ಅಲ್ಲಿಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ತರಾಟೆಗೆ ತೆಗೆದುಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಆಕೆಯನ್ನು ತಡೆಯುವ ಬದಲು ಆತ್ಮಹತ್ಯೆಯ ಲೈವ್ ವಿಡಿಯೋ ನೋಡಿ ನಿರ್ಲಕ್ಷಿಸಿದ್ದಾರೆ ಎಂದು ದೇವಿಕಾ ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

ದೇವಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಆಗಿದ್ದಳು ಎಂಬುದು ತಿಳಿದುಬಂದಿದೆ. ಇಬ್ಬರದ್ದೂ ಪ್ರೇಮ ವಿವಾಹವಾಗಿದ್ದು, ಇದಕ್ಕೆ ಮನೆಯವರ ಒಪ್ಪಿಗೆ ಇರಲಿಲ್ಲ ಎಂದೂ ಹೇಳಲಾಗಿದೆ.


Spread the love

LEAVE A REPLY

Please enter your comment!
Please enter your name here