‘ರಾಮಾಯಣ’ ಸಿನಿಮಾದ ಶೂಟಿಂಗ್‌ ನಲ್ಲಿ ಭಾಗಿಯಾದ ನಟ ಯಶ್

0
Spread the love

ಕೆಜಿಎಫ್‌ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ಯಶ್‌ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿರುವಾಗಲೇ ಯಶ್‌ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಯೆಸ್.‌ ರಾಮಾಯಣ ಸಿನಿಮಾದ ಕೆಲಸದಲ್ಲಿ ಯಶ್‌ ತೊಡಗಿಕೊಂಡಿದ್ದಾರೆ. ‘ರಾಮಾಯಣ’ ಸಿನಿಮಾನಲ್ಲಿ ಯಶ್‌ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಈಗಾಗಲೇ ಬಹಳ ಸಮಯವಾಗಿದೆ. ಆದರೆ ಯಶ್, ಈಗ ‘ರಾಮಾಯಣ’ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

Advertisement

ನಿನ್ನೆಯಿಂದಲೇ ಯಶ್‌ ‘ರಾಮಾಯಣ’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಸತತ ಒಂದು ತಿಂಗಳು ಕಾಲ ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಸುಸಜ್ಜಿತ ಸ್ಟುಡಿಯೋನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಪ್ರಸ್ತುತ ಯಶ್ ಮಾತ್ರವೇ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ 30 ದಿನಗಳಲ್ಲಿ ಯಶ್ ಅವರು ‘ರಾಮಾಯಣ’ ಸಿನಿಮಾದ ಪಾರ್ಟ್​ 1 ಸಿನಿಮಾಕ್ಕೆ ಸಂಬಂಧಿಸಿದ ದೃಶ್ಯಗಳಲ್ಲಿ ನಟಿಸಲಿದ್ದಾರೆ. ಮುಂದಿನ ಶೆಡ್ಯೂಲ್​ನಲ್ಲಿ ಪಾರ್ಟ್​ 2ಗೆ ಸಂಬಂಧಿಸಿದ ದೃಶ್ಯಗಳಲ್ಲಿಯೂ ಯಶ್ ನಟಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಯಶ್ ‘ರಾಮಾಯಣ’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೊದಲು ಕೆಲವು ಟ್ರೈನಿಂಗ್ ಸೆಷನ್ಸ್​ನಲ್ಲಿ ಯಶ್ ಭಾಗಿ ಆಗಿದ್ದರು. ‘ರಾಮಾಯಣ’ ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡುತ್ತಿರುವ ಕಾರಣ ನಟರೆಲ್ಲರಿಗೂ ವಿಶೇಷ ತರಬೇತಿಯನ್ನು ನೀಡಲಾಗಿತ್ತು. ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಕೆಲ ದಿನಗಳ ಮುಂಚೆಯಷ್ಟೆ ನಟ ಯಶ್ ಉಜ್ಜಯಿನಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದರು. ಈ ವೇಳೆ ಅವರ ಪತ್ನಿ ರಾಧಿಕಾ ಪಂಡಿತ್ ಸಹ ಜೊತೆಯಲ್ಲಿದ್ದರು.

ಯಶ್ ಅವರ ಮುಂದಿನ ಶೆಡ್ಯೂಲ್​​ನಲ್ಲಿ ಅವರು ಸಾಯಿ ಪಲ್ಲವಿ, ರಣ್​ಬೀರ್ ಕಪೂರ್ ಹಾಗೂ ಸನ್ನಿ ಡಿಯೋಲ್ ಅವರುಗಳ ಜೊತೆಗೆ ಚಿತ್ರೀಕರಣ ಮಾಡಲಿದ್ದಾರೆ. ‘ರಾಮಾಯಣ’ ಸಿನಿಮಾನಲ್ಲಿ ನಟ ಯಶ್ ನಟರಷ್ಟೆ ಅಲ್ಲದೆ ನಿರ್ಮಾಪಕರೂ ಸಹ ಆಗಿದ್ದಾರೆ. ಈ ಪ್ರಾಜೆಕ್ಟ್​ಗೆ ಅವರ ಮಾನ್ಸ್ಟರ್ ಮೈಂಡ್ಸ್ ಮೂಲಕ ಬಂಡವಾಳ ತೊಡಗಿಸಿದ್ದಾರೆ. ದುಬಾರಿ ಬಜೆಟ್‌ ನಲ್ಲಿ ರೆಡಿಯಾಗುತ್ತಿರುವ ರಾಮಾಯಣ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಇದೆ.

 


Spread the love

LEAVE A REPLY

Please enter your comment!
Please enter your name here