ಸ್ಯಾಂಡಲ್‌ವುಡ್ ಸ್ಟಾರ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪೋಷಕರಾದ ಸಂಭ್ರಮದಲ್ಲಿದ್ದಾರೆ.ನಟಿ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Advertisement
ಮದುವೆ ಆ್ಯನಿವರ್ಸರಿ ದಿನವೇ (ಜ.26) ಹರಿಪ್ರಿಯಾ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮದುವೆಯಾದ ದಿನವನ್ನು ಮತ್ತಷ್ಟು ಸ್ಪೆಷಲ್ ಆಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವಸಿಷ್ಠ ಸಿಂಹ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಇನ್ನೂ 2023ರಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ಜೋಡಿ ಮದುವೆಯ ಮುದ್ರೆ ಒತ್ತಿದ್ದರು. ಮದುವೆಯಾದ ಎರಡು ವರ್ಷಕ್ಕೆ ಜೋಡಿಯ ಬಾಳಲ್ಲಿ ಮುದ್ದಾಗ ಮಗವಿನ ಆಗಮನವಾಗಿದೆ.