HomeEntertainmentತನ್ನ ಬಾಳಲ್ಲಿ ನಡೆದಿದ್ದ ದುರಂತದ ಬಗ್ಗೆ ಕೊನೆಗೂ ಮೌನ ಮುರಿದು ಭಾವುಕರಾದ ನಟಿ ಶ್ರೀನಿಧಿ

ತನ್ನ ಬಾಳಲ್ಲಿ ನಡೆದಿದ್ದ ದುರಂತದ ಬಗ್ಗೆ ಕೊನೆಗೂ ಮೌನ ಮುರಿದು ಭಾವುಕರಾದ ನಟಿ ಶ್ರೀನಿಧಿ

For Dai;y Updates Join Our whatsapp Group

Spread the love

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆಜಿಎಫ್‌ ಸಿನಿಮಾದಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ನಟಿ ಶ್ರೀನಿಧಿ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಾನಿ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ಚಿತ್ರ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಈ ಚಿತ್ರ ಈಗಾಗಲೇ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಮಧ್ಯೆ ನಟಿ ತಮ್ಮ ಬಾಳಿನಲ್ಲಿ ನಡೆದ ದುರಂತ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ.

2016 ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಕಿರೀಟವನ್ನು ಗೆದ್ದ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶ್ರೀನಿಧಿ ‘ಕೆಜಿಎಫ್’ ಚಿತ್ರದ ಮೂಲಕ ಸಖತ್‌ ಸದ್ದು ಮಾಡಿದ್ದರು. ಮೊದಲ ಚಿತ್ರದಲ್ಲೇ ಯಶಸ್ಸು ಸಾಧಿಸಿದ ನಟಿ ಆ ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಸದ್ಯ ಶ್ರೀನಿಧಿ ಶೆಟ್ಟಿ ನ್ಯಾಚುರಲ್ ಸ್ಟಾರ್ ನಾನಿ ಜೊತೆ ‘ಹಿಟ್ 3’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಈ ಮಧ್ಯೆ ನಟಿ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ನೆನೆದು ಭಾವುಕರಾಗಿದ್ದಾರೆ. ಇತ್ತೀಚೆಗೆ ಹಿಟ್ 3 ಪ್ರಚಾರದ ಭಾಗವಾಗಿ, ಸಂದರ್ಶನವೊಂದರಲ್ಲಿ ನಟಿ ಇದನ್ನು ಬಹಿರಂಗಪಡಿಸಿದ್ದಾರೆ.

‘ನಾನು ಹತ್ತನೇ ತರಗತಿಯಲ್ಲಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡೆ. ಆ ಸಮಯದಲ್ಲಿ, ದೇವರ ಮೇಲಿನ ಅವಳ ಭಕ್ತಿ, ನಂಬಿಕೆ ಮತ್ತು ಎಲ್ಲವೂ ಕ್ಷಣಮಾತ್ರದಲ್ಲಿ ಛಿದ್ರವಾದಂತೆ ತೋರುತ್ತಿತ್ತು. ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲ. ಅದಕ್ಕಾಗಿಯೇ ನಾನು ಬೆಂಗಳೂರಿಗೆ ಬಂದೆ. ಇಲ್ಲಿ ಹೊಸ ಜನರೊಂದಿಗೆ ವಾಸಿಸಿದೆ. ಹಳೆಯ ವಿಷಯಗಳನ್ನು ಮರೆಯಲು ಪ್ರಯತ್ನಿಸಿದೆ’ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!