ಮುಂಬೈ: ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ ಚಿತ್ರದ ಬಿಡುಗಡೆ ಬಗ್ಗೆ ಹರಿದಾಡುತ್ತಿದ್ದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಸಿನಿಮಾ 2027ಕ್ಕೆ ಮುಂದೂಡಲಾಗಿದೆ ಎಂಬ ಸುದ್ದಿಗಳು ಸುಳ್ಳಾಗಿದ್ದು, ಚಿತ್ರ 2026ರ ಡಿಸೆಂಬರ್ 24ರಂದು ನಿಗದಿಯಂತೆ ಬಿಡುಗಡೆಯಾಗಲಿದೆ.
ಆದರೆ ‘ಕಿಂಗ್’ ಬಿಡುಗಡೆಯಾಗುವ ವಾರವೇ ಬಾಕ್ಸ್ ಆಫೀಸ್ನಲ್ಲಿ ಭಾರೀ ಹಣಾಹಣಿ ನಡೆಯಲಿದೆ. ‘ಅವೆಂಜರ್ಸ್: ಡೂಮ್ಸ್ಡೇ’, ‘ಡ್ಯೂನ್: ಪಾರ್ಟ್ 3’ ಮತ್ತು ‘ಜುಮಾಂಜಿ: ಓಪನ್ ವರ್ಲ್ಡ್’ ಸೇರಿದಂತೆ ಹಾಲಿವುಡ್ನ ಮೂರು ದೊಡ್ಡ ಸಿನಿಮಾಗಳು ಡಿಸೆಂಬರ್ 18ರಂದು ತೆರೆಕಾಣಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ‘ಕಿಂಗ್’ಗೆ ಕಠಿಣ ಪೈಪೋಟಿ ನೀಡಲಿವೆ.
ಭಾರತೀಯ ಪ್ರೇಕ್ಷಕರಲ್ಲಿ ಶಾರುಖ್ ಅವರ ಕ್ರೇಜ್ ಇರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಆತಂಕ ಇಲ್ಲ ಎನ್ನಲಾಗುತ್ತಿದೆ. ಆದರೆ ವಿದೇಶಗಳಲ್ಲಿ ಸ್ಕ್ರೀನ್ಗಳ ಹಂಚಿಕೆ ಮತ್ತು ಐಮ್ಯಾಕ್ಸ್ ಪ್ರದರ್ಶನದ ವಿಷಯದಲ್ಲಿ ಸ್ಪರ್ಧೆ ಎದುರಾಗಬಹುದು.
ಇದರ ನಡುವೆಯೂ ಯಶ್ ರಾಜ್ ಫಿಲ್ಮ್ಸ್ ಜಾಗತಿಕ ವಿತರಣೆಯ ಹೊಣೆ ಹೊತ್ತಿರುವುದರಿಂದ, ಶಾರುಖ್ ಅವರ ‘ಕಿಂಗ್’ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಸಿನಿ ವಲಯದಲ್ಲಿದೆ.



