ವಿಜಯಸಾಕ್ಷಿ ಸುದ್ದಿ, ಗದಗ : ಬರ ಪರಿಹಾರವನ್ನು ಜಿಲ್ಲೆಯ ಎಲ್ಲ ರೈತರಿಗೆ ಸಮರ್ಪಕವಾಗಿ ವಿತರಿಸುವಂತೆ ಒತ್ತಾಯಿಸಿ, ಬಿಜೆಪಿ ಗದಗ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
2023-24ನೇ ಸಾಲಿನ ಮುಂಗಾರಿನ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ 2000 ರೂಗಳನ್ನು ರಾಜ್ಯದ ರೈತರಿಗೆ ನೀಡಿತ್ತು. ಕೇಂದ್ರ ಸರ್ಕಾರವು ಬರ ಪರಿಹಾರ 3454 ಕೋಟಿ ರೂಗಳನ್ನು ರಾಜ್ಯದ ರೈತರ ಖಾತೆಗೆ ಬಿಡುಗಡೆ ಮಾಡುತ್ತಿದ್ದಂತೆಯೇ ರಾಜ್ಯ ಮುಂಗಡವಾಗಿ ಕೊಟ್ಟಿದ್ದ 2 ಸಾವಿರ ಹಣವನ್ನು ಕಟಾಯಿಸಿ ಉಳಿದ ಮೊತ್ತವನ್ನು ಜಮೆ ಮಾಡಿ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದೆ. ಈ ಮಾಹಿತಿ ಅರಿಯದ ರೈತರು ಕೇಂದ್ರದಿಂದ ಪರಿಹಾರ ಪೂರ್ಣ ಸಿಕ್ಕಿಲ್ಲವೆಂದು ಗೊಂದಲದಲ್ಲಿದ್ದಾರೆ.
ರೈತರಿಗೆ ಬರ ಪರಿಹಾರ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಜಿಲ್ಲಾದ್ಯಂತ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವದು ಎಂದು ಬಸವರಾಜ ಇಟಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ವಕ್ಕ್ಕರ, ಮುತ್ತಣ್ಣ ಮೂಲಿಮನಿ, ಅಶೋಕ ಕುಡತಿನಿ, ಸಿದ್ದಪ್ಪ ಜೊಂಡಿ, ಆರ್.ಬಿ. ಕುಲಕರ್ಣಿ, ಸಿದ್ದಪ್ಪ ಈರಗಾರ, ಸತೀಶ ಗಿಡ್ಡಹನಮಣ್ಣವರ, ಸೋಮಶೇಖರ ಹಿರೇಮಠ, ಕಳಕಪ್ಪ ಕುರಹಟ್ಟಿ, ಶಂಕರ ಕರಿಬಿಷ್ಠಿ, ಕಳಕಪ್ಪ ಕುಂಬಾರ, ಅಶೋಕ ಸೂರಣಗಿ, ಈರಣ್ಣ ಅಂಗಡಿ, ಮಹೇಶ ಕಮ್ಮಾರ, ಚನವೀರಪ್ಪ ಹೂಗಾರ, ಬಸನಗೌಡ ಪಾಟೀಲ ಸೇರಿದಂತೆ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.