HomeLife Styleಬ್ಯಾಂಕುಗಳಿಗೆ ಸಾಲು ಸಾಲು ರಜೆ: ಸೋಮವಾರ ಗ್ರಾಹಕರ ದಂಡು

ಬ್ಯಾಂಕುಗಳಿಗೆ ಸಾಲು ಸಾಲು ರಜೆ: ಸೋಮವಾರ ಗ್ರಾಹಕರ ದಂಡು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ ಮೂರು ದಿನಗಳಿಂದ ಸಾಲು ಸಾಲು ರಜೆಗಳು ಬಂದಿದ್ದರಿಂದ ಸೋಮವಾರ ಮುಂಜಾನೆಯಿಂದಲೇ ಪಟ್ಟಣದಲ್ಲಿನ ಪ್ರಮುಖ ಬ್ಯಾಂಕುಗಳಲ್ಲಿ ನೂರಾರು ಜನರು ತುಂಬಿಕೊಂಡಿದ್ದರು.

ಶುಕ್ರವಾರ ಬಸವ ಜಯಂತಿ, ಎರಡನೇ ಶನಿವಾರ ಮತ್ತು ರವಿವಾರ ಮೂರು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದ್ದ ಕಾರಣ ಸೋಮವಾರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡು ಬಂದಿತು. ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕೆವಿಜಿ ಬ್ಯಾಂಕ್ ಸೇರಿದಂತೆ ಎಲ್ಲ ಕಡೆಗಳಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು.

ಸ್ಟೇಟ್ ಬ್ಯಾಂಕ್‌ಗೆ ಆಗಮಿಸಿದ್ದ ಗ್ರಾಹಕರಿಗೆ ಎಟಿಎಂ, ಜಮಾ ಮಾಡುವ ಮಷಿನ್, ಪಾಸ್‌ಬುಕ್ ಪ್ರಿಟಿಂಗ್ ಮಷಿನ್‌ಗಳ ಕಿರಿಕಿರಿ ಎದ್ದು ಕಾಣುತ್ತಿತ್ತು. ಹಲವಾರು ದಿನಗಳಿಂದ ರಿಪೇರಿ ಮಾಡಿಸಿಲ್ಲ ಎನ್ನುವದು ಗ್ರಾಹಕರ ದೂರಾಗಿತ್ತು. ಈ ಕುರಿತು ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಅಶೋಕ ಕುಮಾರ ಮಾತನಾಡಿ, ಸಾಲು ಸಾಲು ರಜೆಗಳು ಬಂದಿರುವದರಿಂದ ಗ್ರಾಹಕರು ಹೆಚ್ಚು ಪ್ರಮಾಣದಲ್ಲಿ ಬಂದಿದ್ದಾರೆ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ. ಯಂತ್ರಗಳ ದುರಸ್ಥಿ ನಡೆಯುತ್ತಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವದು ಎಂದರು.

ಇನ್ನೊಂದು ನಗದು ಕೌಂಟರ್ ಪ್ರಾರಂಭಿಸುವದರಿಂದ ಗ್ರಾಹಕರಿಗೆ ಅನೂಕೂಲವಾಗಲಿದ್ದು, ಅದನ್ನು ಶೀಘ್ರವೇ ಸರಿಪಡುವಂತೆ ಗ್ರಾಹಕ ಶಂಕರ ಬ್ಯಾಡಗಿ ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!